ಕೊಡಗು: ಜಿಲ್ಲೆಯಲ್ಲಿ ಗಾಳಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದೆ. ಮಡಿಕೇರಿ - ಮಂಗಳೂರು ಹೆದ್ದಾರಿ ಮೇಲೆ ಗುಡ್ಡ ಕುಸಿತವಾಗಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಮಡಿಕೇರಿ ಹೊರವಲಯದ ಮೊಣ್ಣಂಗೇರಿ ಬಳಿ ಘಟನೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಅಲ್ಲದೇ ಮಳೆಗೆ ಸೋಮವಾರಪೇಟೆ, ಶನಿವಾರ ಸಂತೆ ಸಮೀಪದ ಸುಳುಗಳಲೇ ಗ್ರಾಮದಲ್ಲಿ ಗೋಡೆ ಕುಸಿತವಾಗಿ ವಸಂತಮ್ಮ ಎಂಬ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓದಿ: ರಾಜ್ಯದ ಹಲವೆಡೆ ಮುಂದುವರಿದ ಮಳೆ ಅಬ್ಬರ.. ನೆರೆ ಭೀತಿಯಲ್ಲಿ ನದಿ ತೀರದ ಜನ