ETV Bharat / state

ಕೊಡಗಿನಲ್ಲಿ ವರುಣನ ಅಬ್ಬರ : ರಸ್ತೆ ಮೇಲೆ ಹೊಳೆಯಂತೆ ಹರಿದ ನೀರು - ಕುಶಾಲನಗರದಲ್ಲಿ ಭಾರೀ ಮಳೆ

ಕುಶಾಲನಗರದ ಪ್ರಮುಖ ರಸ್ತೆಯಲ್ಲಿ ಸುರಿದ ಧಾರಾಕಾರ ಮಳೆಗೆ ನೀರು ಉಕ್ಕಿಹರಿದು ಅಂಗಡಿಗಳ ಒಳಗೆ ನುಗ್ಗಿದೆ.

Heavy rain in kodagu
ಕೊಡಗಿನಲ್ಲಿ ಭಾರೀ ಮಳೆ
author img

By

Published : Nov 23, 2021, 10:56 PM IST

ಕೊಡಗು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಪರಿಣಾಮ ನಗರದ ಪ್ರಮುಖ ರಸ್ತೆಗಳಿಗೆ ನೀರು ನುಗ್ಗಿದೆ.

ಕುಶಾಲನಗರದ ಪ್ರಮುಖ ರಸ್ತೆಯಲ್ಲಿ ನೀರು ಉಕ್ಕಿಹರಿದು ಅಂಗಡಿಗಳ ಒಳಗೆ ನುಗ್ಗಿದೆ. ಹೀಗಾಗಿ, ಅಂಗಡಿ ಮಾಲೀಕರು ಆತಂಕಕ್ಕೆ ಸಿಲುಕಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಸಾಕಷ್ಟು ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಚುನಾವಣಾ ಆಯೋಗದ ಅನುಮತಿ ಮೇರೆಗೆ ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ನಿನ್ನೆ ಸಚಿವ ಆರ್‌.ಅಶೋಕ್‌ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಅವರು ಆದಷ್ಟು ಬೇಗ ಬೆಳೆ ನಷ್ಟಕ್ಕೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಸುಬ್ರಹ್ಮಣ್ಯ: ಹಾಡಹಗಲೇ ಮನೆ ಅಂಗಳದಲ್ಲಿ ಸಂಚರಿಸಿದ ಕಾಡಾನೆ, ಭಯಭೀತರಾದ ಜನತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.