ETV Bharat / state

ಮಂಜಿನ ನಗರಿಯಲ್ಲಿ ಮುಂಗಾರು ಚುರುಕು.. ಗರಿಗೆದರಿದ ಕೃಷಿ ಚಟುವಟಿಕೆ

ಕೊಡಗಿನಲ್ಲಿ ರಾತ್ರಿಯಿಡಿ ಮಳೆಯಾಗಿದ್ದು, ಮಂಜಾನೆ ಸ್ವಲ್ಪ ಮಟ್ಟಿಗೆ ವರುಣ ಆರ್ಭಟ ತಗ್ಗಿದೆ. ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದ್ದು ಜನರು ರಾತ್ರಿಯಿಡಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಂಜಿನ ನಗರಿಯಲ್ಲಿ ಮುಂಗಾರು ಚುರುಕು..
author img

By

Published : Jul 6, 2019, 12:27 PM IST

ಕೊಡಗು: ನಿನ್ನೆಯಿಂದ ಜಿಲ್ಲಾದ್ಯಂತ ಮುಂಗಾರು ಚುರುಕುಗೊಂಡಿದ್ದು,ರಾತ್ರಿಯಿಡಿ ಎಡೆಬಿಡದೇ ಮಳೆಯಾಗಿದೆ.

ಮಂಜಿನ ನಗರಿಯಲ್ಲಿ ಮುಂಗಾರು ಚುರುಕು..

ವರುಣ ಆಗಮನ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ತಡವಾಗಿಯೇ ಆರಂಭವಾಗಿದೆ. ನಿನ್ನೆಯಿಂದ ಅಹೋರಾತ್ರಿ ಸುರಿದ ಮಳೆಗೆ ಜನತೆ ಹೈರಾಣಾಗಿದ್ದು, ಪುಷ್ಪಗಿರಿ, ಬ್ರಹ್ಮಗಿರಿ ತಪ್ಪಲಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳ - ಕೊಳ್ಳ, ನದಿ - ತೊರೆಗಳು ಹಾಗೂ ಕಾವೇರಿ ಕೊಳ್ಳದ ಭಾಗದಲ್ಲೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.‌ ಕೆಲವು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದ್ದು, ಮಳೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಹಾಗೆಯೇ, ಕಳೆದ ಬಾರಿ ದುರಂತದ ಸ್ಥಳಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ‌. ಈಗಾಗಲೇ ಸಂಭಾವ್ಯ ಅಪಾಯ ಎದುರಿಸಲು ಜಿಲ್ಲಾಡಳಿತವೂ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎನ್​​ಡಿಆರ್​ಎಫ್​​ ವಿಪತ್ತು ನಿರ್ವಹಣಾ ತಂಡ ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ ಅಪಾಯಕಾರಿ ಸ್ಥಳಗಳ ಮೇಲೆ ನಿಗಾ ಇಟ್ಟಿದೆ. ಸದ್ಯ ಮುಂಜಾನೆಯಿಂದ ಮಳೆಯ ಪ್ರಮಾಣ ಕೊಂಚ ತಗ್ಗಿದೆ‌.

Intro:ರಾತ್ರಿಯಿಡಿ ಮುಂದುವರೆದು ಬೆಳಿಗ್ಗೆ ಬಿಡುವು ಕೊಟ್ಟ ವರುಣ

ಕೊಡಗು: ನೆನ್ನೆಯಿಂದ ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದ್ದು,ರಾತ್ರಿಯಿಡಿ ಎಡೆಬಿಡದೆ ಮಳೆಯಾಗಿದೆ.

ವರುಣ ಕಳದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ತಡವಾಗಿಯೇ ಆರಂಭವಾಗಿದೆ.ನೆನ್ನೆಯಿಂದ ಆಹೋರಾತ್ರಿ ಸುರಿದ ಮಳೆಗೆ ಜನತೆ ಹೈರಾಣಾಗಿದ್ದು, ಪುಷ್ಪಗಿರಿ, ಬ್ರಹ್ಮಗಿರಿ ತಪ್ಪಲಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳ, ನದಿ-ತೊರೆಗಳು ಹಾಗೂ ಕಾವೇರಿ ಕೊಳ್ಳದ ಭಾಗದಲ್ಲೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.‌

ಕೆಲವು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದ್ದು,ಮಳೆ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.ಹಾಗೆಯೇ ಕಳೆದ ಬಾರಿಯ ದುರಂತದ ಸ್ಥಳಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ‌.ಈಗಾಗಲೇ ಸಂಭಾವ್ಯ ಅಪಾಯ ಎದುರಿಸಲು ಜಿಲ್ಲಾಡಳಿತವೂ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎನ್.ಡಿ.ಆರ್‌.ಎಫ್ ವಿಪತ್ತು ನಿರ್ವಹಣಾ ತಂಡ ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ ಅಪಾಯಕಾರಿ ಸ್ಥಳಗಳ ಮೇಲೆ ನಿಗಾ ಇಟ್ಟಿದೆ.
ಸದ್ಯ ಮುಂಜಾನೆಯಿಂದ ಮಳೆಯ ಪ್ರಮಾಣ ಕೊಂಚ ತಗ್ಗಿದೆ‌.

- ಕೆ.ಸಿ.ಮಣಿಕಂಠ,ಈಟಿವಿ ಭಾರತ, ಕೊಡಗು.Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.