ಕೊಡಗು: ಜಿಲ್ಲೆಯಲ್ಲಿ ಕೊರೊನಾ ಆರ್ಭಟಿಸುತ್ತಿದ್ದಂತೆ ಬೆಚ್ಚಿಬಿದ್ದಿರುವ ಸಲೂನ್ ಅಂಗಡಿ ಮಾಲಿಕರು ವೃತ್ತಿಯಿಂದ ಹಿಂದೆ ಸರಿದಿದ್ದಾರೆ.
ಹೌದು ಕೊಡಗಿನಲ್ಲಿ ಜೂನ್ 30 ವರೆಗೆ ಎಲ್ಲಾ ಶಾಪ್‌ಗಳನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಎಲ್ಲಾ ರೀತಿಯಿಂದ ಸೇಫ್ಟಿ ಮೆಜರ್ಮೆಂಟ್ ಬಳಸಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಕೊರೊನಾ ಹರಡಿದೆ. ಇನ್ನು ನಾವು ಜನರನ್ನು ಮುಟ್ಟಿಯೇ ಹೇರ್‌ಕಟ್, ಶೇವಿಂಗ್ ಮಾಡಬೇಕು. ಹೀಗಾಗಿ ನಮಗೆ ಆತಂಕವಿದ್ದು, ಜೂನ್ ಅಂತ್ಯದವರೆಗೆ ಶಾಪ್‍ಗಳನ್ನು ಬಂದ್ ಮಾಡಿದ್ದೇವೆ. ಮನೆಗೆ ತೆರಳಿಯೂ ಸೇವೆ ನೀಡುವುದಿಲ್ಲ ಎಂದು ಸವಿತಾ ಸಮಾಜದ ಜಿಲ್ಲಾ ಸಭೆ ನಿರ್ಧರಿಸಿದೆ.
ಸಭೆಯ ತೀರ್ಮಾನದಂತೆ ನಿನ್ನೆಯಿಂದಲೇ ಶಾಪ್‌ಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿರುವ 490 ಕ್ಕೂ ಹೆಚ್ಚು ವೃತ್ತಿ ಬಾಂಧವರು ತಮ್ಮ ಸೇವೆಯನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ಜುಲೈ ತಿಂಗಳಲ್ಲಿ ಸಾಧ್ಯವಾದರೆ ಹೆಚ್ಚಿನ ಸೇಫ್ಟಿ ಮೆಜರ್ಮೆಂಟ್ ಬಳಸಿಕೊಂಡು ಸೇವೆ ಮಾಡಬೇಕೆ ಬೇಡವೇ ಎನ್ನೋದನ್ನು ನಿರ್ಧಸುತ್ತೇವೆ ಎಂದು ಸವಿತಾ ಸಮಾಜದ ಮುಖಂಡರು ಹೇಳಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಒಂದೊಂದೇ ಸೇವೆ ಬಂದ್ ಆಗುತ್ತಿದ್ದು, ಬಹುತೇಕ ಲಾಕ್ಡೌನ್ ಸ್ಥಿತಿ ಮುಂದುವರೆದಿದೆ.