ETV Bharat / state

ದುಬಾರಿ ಬೆಲೆಯ ಕಪ್ಪು ಅಕ್ಕಿಯ ಭತ್ತದ ತಳಿ ಬೆಳೆದ ಪದವೀಧರ ಯುವಕ.. - kodagu black paddy grown news

ಆತ ಚಿಕ್ಕಪ್ಪನ ಮದುವೆಗೆ ದುಬೈ‌ನಿಂದ ಬಂದಿದ್ದ. ಮದುವೆ ಮುಗಿಸಿಕೊಂಡು ಹೋಗಬೇಕು ಅನ್ನೋವಷ್ಟರಲ್ಲಿ ಕೊರೊನಾ ಲಾಕ್​ಡೌನ್​​ ಘೋಷಿಸಿದ ಪರಿಣಾಮ ಆತ ಅಲ್ಲಿಯೇ ಉಳಿಯಬೇಕಾಯಿತು. ಆದರೆ, ಸಮಯ ವ್ಯರ್ಥ ಮಾಡದೇ ಹೊಸ ಪ್ರಯತ್ನಕ್ಕೆ ಮುಂದಾಗಿದ್ದ..

ಕಪ್ಪು ಅಕ್ಕಿಯ ಭತ್ತದ ತಳಿ
ಕಪ್ಪು ಅಕ್ಕಿಯ ಭತ್ತದ ತಳಿ
author img

By

Published : Dec 2, 2020, 4:41 PM IST

ಸಿದ್ದಾಪುರ/ಕೊಡಗು: ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಮೆಕ್ಯಾನಿಕಲ್​ ಎಂಜಿನಿಯರ್ ಸಾಯೂಜ್ ಲಾಕ್‌ಡೌನ್ ಅವಧಿಯನ್ನು ವಿನೂತನ ರೀತಿ ಸದ್ಬಳಕೆ ಮಾಡಿಕೊಂಡಿದ್ದಾರೆ. ತಮ್ಮ 2 ಎಕರೆ ಗದ್ದೆಯಲ್ಲಿ ಭತ್ತದ ಫಸಲು ಬೆಳೆದು ನಿಂತಿದ್ದು, ಕಟಾವಿಗೆ ಸಿದ್ಧವಾಗಿದೆ.

ಕೊರೊನಾದಿಂದಾಗಿ ಕೆಲಸ ಇಲ್ಲದೇ ಇರುವ ವೇಳೆ ಪಾಳು ಬಿಟ್ಟಿದ್ದ 2 ಎಕರೆ ಗದ್ದೆಯಲ್ಲಿ ದುಬಾರಿ ಬೆಲೆ ಕಪ್ಪುಅಕ್ಕಿಯ ಭತ್ತದ ತಳಿ ಜೀವ ತಳೆದು ನಿಂತಿದೆ. ಪಾಳು ಭೂಮಿ ಇದೀಗ ಹಸಿರಿನಿಂದ ಕಂಗೊಳಿಸುತ್ತಿದೆ.

ಕಪ್ಪು ಅಕ್ಕಿಯ ಭತ್ತದ ತಳಿ ಬೆಳೆದ ಪದವೀಧರ ಯುವಕ..

ಉಳಿದ ಗದ್ದೆಯಲ್ಲಿ ದೊಡ್ಡಿ ಅಕ್ಕಿ, ಕೊಡಗು ಜೀರಿಗೆ ಅಕ್ಕಿ, ತನು ತಳಿ ಭತ್ತ ಬೆಳೆಯಲಾಗಿದೆ. ಕಪ್ಪು ಅಕ್ಕಿಯಲ್ಲಿ ಮಣಿಪುರ ಹಾಗೂ ಬರ್ಮಾ ತಳಿ ಕೂಡ ನಾಟಿ ಮಾಡಲಾಗಿದೆ. ಬರ್ಮಾ ಮಾರುಕಟ್ಟೆಯಲ್ಲಿ ಕಪ್ಪು ಅಕ್ಕಿಗೆ ಬಹುಬೇಡಿಕೆ ಇದ್ದು, ಪ್ರತಿ ಕೆಜಿ ಅಕ್ಕಿಗೆ ₹300 ಬೆಲೆ ಇದೆ ಎಂದು ಹೇಳಲಾಗುತ್ತಿದೆ.

ನೆಲ್ಯಹುದಿಕೇರಿ ಸಾಯೂಜ್ ಮೆಕಾನಿಕಲ್ ಎಂಜಿನಿಯರ್‌ ದುಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಫ್ಟವೇರ್ ಎಂಜಿನಿಯರ್ ಆಗಿರುವ ಶ್ರೇಯಸ್, ಸ್ಥಳೀಯ ಡಾಮಿನಸ್ ಯುವಕ ಸಂಘದ ಅಧ್ಯಕ್ಷ ಹಾಗೂ ಯುವ ಕೃಷಿಕ ಶೌಕತ್, ಕೆ ಟಿ ಶಾಜಿ ಅವರು ಸೇರಿಕೊಂಡು ಕೃಷಿ ಆರಂಭಿಸಿದ್ದರು. ಛತ್ತೀಸ್‌ಗಢದಿಂದ ಕಪ್ಪು ಅಕ್ಕಿಯ ಭತ್ತದ ತಳಿಯ ಬೀಜಗಳನ್ನು ತಂದು ಬಿತ್ತನೆ ಮಾಡಿ ಯಶಸ್ವಿಯಾಗಿದ್ದಾರೆ.

ಅಂಬಾವಿಲಾಸ ಫೋಟೋ ಹಾಕಿ ಟ್ವಿಟರ್​ನಲ್ಲಿ ಇದರ ಮಹತ್ವ ಸಾರುತ್ತಿರುವ ವಿದೇಶಿಗರು

ಸಾಫ್ಟವೇರ್ ಎಂಜಿನಿಯರ್ ಆಗಿರುವ ಶ್ರೇಯಸ್ ಡ್ರಾಪ್‌ಔಟ್ ಎಂಬ ಆಡ್ರಾಯ್ಡ್ ಆ್ಯಪ್​​ ತಯಾರಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗದಲ್ಲಿ ಆನ್‌ಲೈನ್ ಮೂಲಕ ತರಕಾರಿ ಮುಂತಾದ ಸಾಮಾಗ್ರಿಗಳನ್ನು ತಲುಪಿಸುವ ಗುರಿ ಹೊಂದಿದ್ದಾರೆ.‌ ತಾವು ಬೆಳೆದ ಭತ್ತದ ಅಕ್ಕಿಯನ್ನು ಆ್ಯಪ್​​ ಮೂಲಕ ಮಾರಾಟ ಮಾಡಲು ಚಿಂತನೆ ನಡೆಸಿದ್ದಾರೆ.

ಭತ್ತ ಕಟಾವು ಮಾಡಿದ ಬಳಿಕ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಈ ತಳಿಯ ಭತ್ತ ಆರೋಗ್ಯಕ್ಕೂ ಅನುಕೂಲವಾಗಿದ್ದು, ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಗೂ ಅತ್ಯುಪಯುಕ್ತ ಎನ್ನಲಾಗಿದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.