ಕೊಡಗು: ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಶುಂಠಿಬೆಳೆ ಉತ್ತಮ ಇಳುವರಿ ಬಂದಿರುವುದರಿಂದ ಲಾಭ ತಂದು ಕೊಡುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಕೊರೊನಾ ಬಳಿಕ ಇದೀಗ ಶುಂಠಿ ದರ ಕುಸಿದಿದ್ದು, ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಕುಶಾಲನಗರ, ಸೋಮವಾರಪೇಟೆ ಭಾಗದಲ್ಲಿ ಹೆಚ್ಚಾಗಿ ಶುಂಠಿ ಬೆಳೆ ಬೆಳೆಯಲಾಗಿತ್ತು. ಬ್ಯಾಂಕ್ನಿಂದ ಕೃಷಿ ಸಾಲ ಪಡೆದಿದ್ದ ರೈತರು ಉತ್ತಮ ದರದ ನಿರೀಕ್ಷೆಯಲ್ಲಿದ್ದರು. ಕಳೆದ ಮೂರು ವರ್ಷಗಳಿಂದ ಅಧಿಕ ಮಳೆಗೆ ಕೊಳೆ ರೋಗ ಬಂದು ಶುಂಠಿ ಬೆಳೆ ನಾಶವಾಗುತ್ತಿತ್ತು. ಆದರೆ ಈ ವರ್ಷ ಮಳೆ ಕಡಿಮೆಯಾಗಿ ಉತ್ತಮ ಫಸಲು ರೈತರ ಕೈಸೇರಿದೆ.
ಈ ಮೊದಲು ಶುಂಠಿ ಚೀಲಕ್ಕೆ 3,000 ದಿಂದ 6,000 ರೂಪಾಯಿವರೆಗೂ ಧಾರಣೆ ಇತ್ತು. ಆದರೆ ಇದೀಗ ಚೀಲ ಶುಂಠಿಗೆ ಕೇವಲ ರೂ. 600 ರಿಂದ 700ರಷ್ಟಿದೆ. ಇದರಿಂದ ಶುಂಠಿ ಬೆಳೆದಿದ್ದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ.
ಶುಂಠಿ ಬೆಳೆಯಲ್ಲಿ ಈ ಬಾರಿಯಾದರೂ ಲಾಭ ಗಳಿಸುವ ಕನಸು ಕಂಡಿದ್ದ ರೈತರಿಗೆ ಬೆಲೆ ಕೇಳಿ ಬರಸಿಡಿಲು ಬಡಿದಂತಾಗಿದೆ. ಸಾಲ ಮಾಡಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಶುಂಠಿ ಈಗ ರೈತರಿಗೆ ಕಣ್ಣೀರು ತರಿಸುತ್ತಿದೆ.
ಇದನ್ನೂ ಓದಿ: ವಿಜಯಪುರ ಮಗು ಮಾರಾಟ ಪ್ರಕರಣಕ್ಕೆ ಟ್ವಿಸ್ಟ್: ಹುಬ್ಬಳ್ಳಿಯ ಕಿಮ್ಸ್ನಲ್ಲಿ ಶಿಶು ಪತ್ತೆ