ಕೊಡಗು: ಭಾಗಮಂಡಲ ವಲಯದ ಕರಿಕೆ ಉಪ ವಲಯ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಕಡವೆ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
![Illegal elk case , ಕಡವೆ ಬೇಟೆ ಪ್ರಕರಣ](https://etvbharatimages.akamaized.net/etvbharat/prod-images/kn-kdg-02-19-kadavebeete-7207093_02112019092524_0211f_1572666924_6.jpg)
ಕರಿಕೆ ಗ್ರಾಮದ ಎಳ್ಳುಕೊಚ್ಚಿ ಮಡೆಕಾನ ನಿವಾಸಿ ರಾಘವ ಬಂಧಿತ ಆರೋಪಿ.
ಬೇಟೆಯಾಡಿ ಕಡವೆ ಮಾಂಸವನ್ನು ಕೇರಳ ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡಿದ ಖಚಿತ ಮಾಹಿತಿಗೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ಮೊಕದ್ದಮೆ ದಾಖಲಿಸಿದ್ದಾರೆ.
ಆರೋಪಿಯಿಂದ ಕಡವೆ ತಲೆ, ಚರ್ಮ, ಕಾಲುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕೇಬಲ್ ವಯರ್ ಹಾಗು ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ನೆರೆಯ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಬೇಟೆಯಾಗಿ ಮಾಂಸ ಪೂರೈಸುವುದೇ ಈತನ ದಂಧೆಯಾಗಿತ್ತು ಎನ್ನಲಾಗಿದೆ.