ETV Bharat / state

ವನ್ಯಪ್ರಾಣಿಗಳ ಬೇಟೆ: ಸೋಮವಾರಪೇಟೆಯಲ್ಲಿ ನಾಲ್ವರು ಆರೋಪಿಗಳು ಅಂದರ್​

ವನ್ಯಪ್ರಾಣಿಗಳ ಬೇಟೆಯಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್. ಪ್ರಭಾಕರನ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ದೇವರಾಜ್ ನೇತೃತ್ವದಲ್ಲಿನ ತಂಡ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೆ.ಸಿ. ಸುಂದರ, ಪಿ.ಕೆ. ರಾಮ, ಜೋಷಿ ಜಾರ್ಜ್, ಎಂ.ಆರ್. ಕೃಷ್ಣನ್ ಬಂಧಿತರು.

Five arrested on charges of hunting wildlife at somavarapete
ವನ್ಯಪ್ರಾಣಿಗಳ ಬೇಟೆಯಾಡಿದ ಆರೋಪದ ಮೇಲೆ ನಾಲ್ವರ ಬಂಧನ
author img

By

Published : May 31, 2020, 2:40 PM IST

Updated : May 31, 2020, 3:25 PM IST

ಸೋಮವಾರಪೇಟೆ: ಕರಿಕೆ ಸಮೀಪದ ಚೆತ್ತುಕಾಯ ಎಂಬಲ್ಲಿ ಮೀಸಲು ಅರಣ್ಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ವರು ಬೇಟೆಗಾರರನ್ನು ಬಂಧಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ದೇವರಾಜ್ ನೇತೃತ್ವದಲ್ಲಿನ ತಂಡ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೆ.ಸಿ. ಸುಂದರ, ಪಿ.ಕೆ. ರಾಮ, ಜೋಷಿ ಜಾರ್ಜ್, ಎಂ.ಆರ್. ಕೃಷ್ಣನ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

‌ಬಂಧಿತರಿಂದ ಮತ್ತೋರ್ವ ಆರೋಪಿ ಕೆ.ಕೆ. ನಿರ್ಮಲಾನಂದ ಅವರಿಗೆ ಸೇರಿದ ಒಂಟಿ ನಳಿಕೆ ಕೋವಿ ಹಾಗು ಬೇಟೆಯಾಡಿದ ಕೆಂಜಳಿಲು, ಮುಷಿಯಾ ಸೇರಿದಂತೆ ಇತರೆ ವನ್ಯಪ್ರಾಣಿಗಳ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಐದು ಜನರ ಮೇಲೆ ವನ್ಯಜೀವಿ ಸಂರಕ್ಷಣಾಕಾಯ್ದೆ 1972 ಕಲಂ9, 39, 44 51, 55 ರ ಪ್ರಕಾರ ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೋರ್ವ ತಲೆಮರೆಸಿಕೊಂಡಿರುವುದರಿಂದ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಬಂಧಿತರಲ್ಲಿ ಪ್ರಥಮ ಆರೋಪಿಯಾದ ಸುಂದರ ಎಂಬಾತನ ವಿರುದ್ಧ ಎರಡು ವರ್ಷಗಳ ಹಿಂದೆ ತಲಕಾವೇರಿ ವನ್ಯದಾಮದ ಸರಹದ್ದಿನ ಅರಣ್ಯ ಪ್ರದೇಶದಲ್ಲಿ ಸಿಂಗಳಿಕ ಬೇಟೆಯಾಡಿದ ಪ್ರಕರಣದ ಹಿನ್ನೆಲೆ ಮಾಂಸ ಹಾಗು ಜೋಡು ನಳಿಕೆ ಬಂದೂಕನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Last Updated : May 31, 2020, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.