ಕೊಡಗು: ಗಡಿಭಾಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗೋಡುವಿನ ಸಮೀಪದ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿದೆ. ಮಾಹಿತಿ ತಿಳಿದ ತಿತಿಮತಿ ವಲಯ ಅರಣ್ಯಧಿಕಾರಿಗಳಾದ ಎಸಿಎಪ್ ಉತ್ತಪ್ಪ, ಆರ್.ಎಪ್.ಒ. ಅಶೋಕ್ ಹುನಗುಂದ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸುಮಾರು 25 ವರ್ಷ ಪ್ರಾಯದ ಹೆಣ್ಣು ಕಾಡಾನೆ ಮೃತಪಟ್ಟು ಅಂದಾಜು ಒಂದು ವಾರ ಕಳೆದಿರಬಹುದೆಂದು ಸ್ಥಳಕ್ಕೆ ಭೇಟಿ ನೀಡಿದ ನಾಗರಹೊಳೆ ವನ್ಯಜೀವಿ ವಿಭಾಗದ ಡಾ.ಚಿಟ್ಯಪ್ಪ ಮಾಹಿತಿ ನೀಡಿದ್ದಾರೆ. ಈ ಭಾಗದ ಸುತ್ತಮುತ್ತಲಿನ ಕಾಫಿ ತೋಟ ಹಾಗೂ ಕರಿಮೆಣಸು ತೋಟದಲ್ಲಿ ಕಾಡಾನೆಗಳಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿ ಕೊಂಡಿರುವ ಈ ಪ್ರದೇಶದಲ್ಲಿ ಸಹಜವಾಗಿಯೇ ಕಾಡಾನೆ ಹಾಗೂ ಇತರೆ ವನ್ಯಜೀವಿಗಳು ರೈತ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ಕತ್ತಲಾಗುತ್ತಿದ್ದಂತೆಯೇ ದಾಳಿ ಮಾಡಿ ಬೆಳೆ ನಾಶ ಮಾಡುತ್ತವೆ.
(ಇದನ್ನೂ ಓದಿ: ಚಾಮರಾಜನಗರ: ವಾಹನಗಳ ಮೇಲೆ ಆನೆಗಳ ಸಿಟ್ಟೇಕೆ?, 2 ಕಾರುಗಳು ಜಖಂ- ವಿಡಿಯೋ)