ETV Bharat / state

ಬೈಕ್​ ಸವಾರರ ಮೇಲೆ ಕಾಡಾನೆ ದಾಳಿ: ಇಬ್ಬರು ಪ್ರಾಣಾಪಾಯದಿಂದ ಪಾರು - ಪಾರು

ಬೈಕ್​ ಸವಾರರ ಮೇಲೆ ಕಾಡಾನೆ ದಾಳಿ ಮಾಡಿದ್ದು ಅದೃಷ್ಟವಶಾತ್​ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.​

ಬೈಕ್​ ಸವಾರರ ಮೇಲೆ ಕಾಡಾನೆ ದಾಳಿ
author img

By

Published : Mar 10, 2019, 1:45 PM IST

ಮಡಿಕೇರಿ: ತೋಟದ ಕೆಲಸ ಮುಗಿಸಿ ಇಬ್ಬರು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಡು ರಸ್ತೆಯಲ್ಲಿ ನಿಂತಿದ್ದ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಚೇಲವಾರ ಜಲಪಾತದ ಬಳಿ ನಡೆದಿದೆ.

ಒಂಟಿ ಸಲಗ ದಾಳಿಯಿಂದ ಬೈಕ್ ನಲ್ಲಿ ಇದ್ದ ಇ‌ಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

mdk
ಬೈಕ್​ ಸವಾರರ ಮೇಲೆ ಕಾಡಾನೆ ದಾಳಿ

ಇಷ್ಟು ದಿನ ಕಾಡಾನೆ ಹಾವಳಿ ನಿಂತಿತ್ತು, ಕೆಲವೊಂದು ಕೃಷಿ ಫಸಲು ನಾಶ ಮಾಡುವುದು ಬಿಟ್ಟರೆ, ಮಾನವನ ಮೇಲೆ ದಾಳಿ ಮಾಡುವ ಘಟನೆ ಸಂಭವಿಸಿರಲಿಲ್ಲ. ಇದೀಗ ಕಾಡಾನೆಗಳ ತವರು ಎನ್ನಿಸಿರುವ ಚೆಯಂಡಾಣೆ, ಕಕ್ಕಬೆ, ನಾಪೋಕ್ಲುವಿನಲ್ಲಿ ಮತ್ತೆ ಆನೆಗಳ ಹಾವಳಿ ಶುರುವಾಗಿದೆ.

ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ವಿರಾಜಪೇಟೆ ತಾಲೂಕಿನ ಚೀಯಣ್ಣ ಮತ್ತು ಕಬ್ಬೆ ಗ್ರಾಮದ ಸುರೇಶ್ ಎಂಬುವರ ಬೈಕಿನಮೇಲೆ ಆನೆ ದಾಳಿ ಮಾಡಿದೆ. ಸದ್ಯ ಇಬ್ಬರಿಗೂ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಬ್ಬರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Intro:Body:

1 KDG -10032019-elephant Attack (1).jpg   

close

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.