ಕೊಡಗು: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಜನರು ತೊಂದರೆೆಗೆ ಸಿಲುಕಿದ್ದಾರೆ. ಆಹಾರ ಅರಸಿ ನಾಡಿಗೆ ಬರುವ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿವೆ. ಇದೀಗ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗಣಗೂರು ನಿವಾಸಿ ಪಾರ್ವತಿ ಶೇಖರ್ ಎಂಬುವರ ಮನೆ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಹಾನಿಯುಂಟುಮಾಡಿದೆ.
ಮನೆಯ ಗೋಡೆ, ಕಿಟಕಿ, ಬೋರ್ವೆಲ್ ಪೈಪ್, ಅಡಿಕೆ, ತೆಂಗು ಕಾಫಿ ಗಿಡಗಳು ನಾಶವಾಗಿದ್ದು, ಅಂದಾಜು ಒಂದು ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ. ಅದೇ ಗ್ರಾಮದ ಎಂ.ಎನ್.ಚಂದ್ರಪ್ಪ ಹಾಗೂ ಕುದುಪಜೆ ನಾಗೇಶ್ ಅವರ ಜಮೀನಿಗೂ ಕಾಲಿಟ್ಟ ಕಾಡಾನೆಗಳು ಶುಂಠಿ, ತೆಂಗು, ಅಡಿಕೆ, ಬಾಳೆ, ಕಾಫಿ ಬೆಳೆಗಳನ್ನೂ ಪುಡಿಗಟ್ಟಿವೆ.
ಇದನ್ನೂ ಓದಿ : ಕಾಡಾನೆ ದಾಳಿ.. ಫಾರೆಸ್ಟ್ ವಾಚರ್ ಸಾವು, ಮಗನಿಗೆ ಗಾಯ