ಕೊಡಗು/ಮಡಿಕೇರಿ: ಮದ್ಯ ಮಾರಾಟ ಸ್ಥಗಿತದಿಂದಾಗಿ ಮದ್ಯ ಪ್ರಿಯರಿಗೆ ತೊಂದರೆ ಉಂಟಾಗಿದೆ ಎಂದು ಕುಶಾಲನಗರ ಬಿಜೆಪಿ ಅಧ್ಯಕ್ಷ ಕೆ. ಜಿ ಮನು ಅಬಕಾರಿ ಸಚಿವರಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಮದ್ಯ ಸ್ಥಗಿತ ಮಾಡಿರುವುದು ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ, ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಮದ್ಯಪಾನ ಪ್ರಿಯ (ಮದ್ಯವ್ಯಸನಿ ಅಲ್ಲ) ಎಂದು ಪತ್ರ ಬರೆದಿದ್ದಾರೆ. ಜೊತೆಗೆ ಅಬಕಾರಿ ಸಚಿವ ನಾಗೇಶ್ ಅವರನ್ನು ಮದ್ಯ ಸರಬರಾಜು ಮತ್ತು ಕುಡುಕರ ಕ್ಷೇಮಾಭಿವೃದ್ಧಿ ಸಚಿವರೆಂದು ಉಲ್ಲೇಕಿಸಿ ಪತ್ರ ಬರೆದಿರುವುದು ವಿಶೇಷವಾಗಿತ್ತು.
ದೈನಂದಿನ ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಮದ್ಯ ಸೇರಿಸದಿರುವುದು ಬೇಸರದ ಸಂಗತಿ ಆದ್ದರಿಂದ ಕೆಲವು ಪ್ರಮುಖ ವಿಷಯಗಳ ಆಧಾರದಲ್ಲಿ ಮದ್ಯದಂಗಡಿ ತೆರೆಯಲು ಸರ್ಕಾರ ಕೂಡಲೇ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.