ETV Bharat / state

ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕಾವೇರಿ ಮಾತೆ - ದಕ್ಷಿಣ ಗಂಗೆ ತಲಕಾವೇರಿ

ದಕ್ಷಿಣ ಗಂಗೆ ತಲಕಾವೇರಿಯಲ್ಲಿ ಪುಣ್ಯಕಾಲ ತುಲಾಸಂಕ್ರಮಣದಲ್ಲಿ ತಿರ್ಥೋದ್ಭವವಾಗಿ ಕಾವೇರಿ ಹರಿದಿದ್ದಾಳೆ. ಪೂರ್ವನಿಗದಿಗಿಂತ ಭಾನುವಾರ 1 ಗಂಟೆ 11 ನಿಮಿಷಕ್ಕೆ ಮಕರ ಲಗ್ನದಲ್ಲಿ ಸರಿಯಾಗಿ ಬ್ರಹ್ಮಕುಂಡಿಕೆಯಿಂದ ಉಕ್ಕಿಬಂದಿದ್ದಾಳೆ.

devotees-witnessed-kaveri-theerthodbhava-at-kodagu
ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕಾವೇರಿ ಮಾತೆ
author img

By

Published : Oct 18, 2021, 7:40 AM IST

ಕೊಡಗು: ಪುರೋಹಿತರ ಮಂತ್ರ ಪಠಣ, ಭಕ್ತರ ಬಾವೋದ್ವೇಗದ ನಡುವೆ ಬ್ರಹ್ಮಕುಂಡಿಕೆಯಿಂದ ತೀರ್ಥಸ್ವರೂಪಿಣಿಯಾಗಿ ಕಾವೇರಿ ಭಕ್ತರಿಗೆ ಭಾನುವಾರ ದರ್ಶನ ನೀಡಿದ್ದಾಳೆ.

ದಕ್ಷಿಣ ಗಂಗೆ ತಲಕಾವೇರಿಯಲ್ಲಿ ಪುಣ್ಯಕಾಲ ತುಲಾಸಂಕ್ರಮಣದಲ್ಲಿ ತಿರ್ಥೋದ್ಭವವಾಗಿ ಕಾವೇರಿ ಹರಿದಿದ್ದಾಳೆ. ಪೂರ್ವನಿಗದಿಗಿಂತ 1 ಗಂಟೆ 11 ನಿಮಿಷಕ್ಕೆ ಮಕರ ಲಗ್ನದಲ್ಲಿ ಸರಿಯಾಗಿ ಬ್ರಹ್ಮಕುಂಡಿಕೆಯಿಂದ ಉಕ್ಕಿಬಂದಿದ್ದಾಳೆ. ತುಲಾ ಮಾಸ, ರೋಹಿಣಿ ನಕ್ಷತ್ರ ಮಕರ ಲಗ್ನದ 1ಗಂಟೆ 11 ನಿಮಿಷಕ್ಕೆ ಸರಿಯಾಗಿ ಕಾವೇರಿಮಾತೆ ಉಕ್ಕಿದ್ದಾಳೆ.

ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕಾವೇರಿ ಮಾತೆ

ಬ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಬರುವ ಪವಿತ್ರ ಕಾವೇರಿ ಜಲವನ್ನು ಸಂಗ್ರಹಿಸಲು ಭಕ್ತರು ಕಾದು ಕುಳಿತಿದ್ದರು. ವಿಶೇಷವಾಗಿ ಕಾವೇರಿ ತನ್ನ ಸಹೋದರಿ ಗಂಗೆಯೊಂದಿಗೆ ಸೇರಿ ತುಲಾ ಸಂಕ್ರಮಣದ ಈ ಕಾಲದಲ್ಲಿ ಉಕ್ಕಿಬಂದಿತು. ಈ ಸಮಯದಲ್ಲಿ ತಲಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿ ತೀರ್ಥ ಸಂಗ್ರಹಿಸಿದರೆ, ಪುಣ್ಯ ಪ್ರಾಪ್ತಿಯಾಗುತ್ತೆ ಎಂಬ ನಂಬಿಕೆಯಿಂದ ಭಕ್ತರು ನೆರೆದಿದ್ದರು.

ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಪುಣ್ಯಸ್ನಾನಕ್ಕೆ ನಿಷೇಧ ಹೇರಲಾಗಿತ್ತು. ಹೀಗಾಗಿ ಭಕ್ತರು ಪವಿತ್ರ ಕಾವೇರಿ ತೀರ್ಥವನ್ನು ಪಡೆದು ಧನ್ಯರಾಗಿದ್ದಾರೆ. ಅಭಿಷೇಕ, ಪಂಚಾಮೃತ ಅಭಿಷೇಕ, ಅರ್ಚನೆ, ಕುಂಕುಮಾರ್ಚನೆ, ಆರತಿ ಸಂಕಲ್ಪ ಸೇರಿ ವಿವಿಧ ಪೂಜೆಗಳನ್ನ ನೆರವೇರಿಸಲಾಯ್ತು.

ಇದನ್ನೂ ಓದಿ: ಭಿಕ್ಷುಕರಿಗೆ ಹಣ ನೀಡುವುದನ್ನು ನಿಲ್ಲಿಸಿ.. ರಾಜಧಾನಿಯ ಸಿಗ್ನಲ್​ಗಳಲ್ಲಿ "ಬೆಂಗಳೂರು ಹುಡುಗರು" ತಂಡದ ಅಭಿಯಾನ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.