ಕೊಡಗು: ಕೊಡಗು ಜಿಲ್ಲೆ ಕಳೆದ ಕೆಲ ವರ್ಷಗಳ ಹಿಂದೆ ಪ್ರಕೃತಿ ವಿಕೋಪ ಹಾಗೂ ಜಲಪ್ರಳಯದಿಂದ ನಲುಗಿ ಹೋಗಿತ್ತು. ಅಂದಿನಿಂದ ಜಿಲ್ಲಾಡಳಿತ ಒಂದು ತಿಂಗಳ ಮೊದಲೇ ಮಳೆಗಾಲದ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹಾರಂಗಿ ಜಲಾಶಯದ ಹಿನ್ನೀರಿಲ್ಲಿ ಸೋಮವಾರದಂದು ಅಣಕು ಪ್ರದರ್ಶನ ನಡೆಸಲಾಯಿತು.
ಕೊಡಗು ಜಿಲ್ಲಾ ಪೊಲೀಸ್ ತಂಡ, ಅಗ್ನಿಶಾಮಕದಳದ ಸಿಬ್ಬಂದಿ ಹೊಳೆಯ ದಡದಲ್ಲಿ ರಕ್ಷಣಾ ಕಾರ್ಯಕ್ಕೆ ಸಿದ್ಧರಾಗಿದ್ದರು. ಜಿಲ್ಲಾಡಳಿತದ ಕಂಟ್ರೋಲ್ ರೂಂಗೆ ಪ್ರವಾಹದಲ್ಲಿ ಒಂದಷ್ಟು ಜನ ಸಿಲುಕಿದ್ದಾರೆಂದು ಮೆಸೇಜ್ ಬಂದ ಕೂಡಲೇ ಅಲರ್ಟ್ ಆಗುವ ಸಿಬ್ಬಂದಿ ಬೋಟ್ನಲ್ಲಿ ತೆರಳಿ ಅವರನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಿ ಕರತಲಾಗುತ್ತದೆ ಎಂಬುದನ್ನು ಪ್ರದರ್ಶಿಸಿದರು.
ಇದನ್ನೂ ಓದಿ: ವಿಧಾನ ಪರಿಷತ್‌ಗೆ ಮರುಆಯ್ಕೆ: ವರಿಷ್ಠರಿಗೆ ಸಿಹಿ ಹಂಚಿ ಧನ್ಯವಾದ ಸಲ್ಲಿಸಿದ ಸವದಿ
ಮತ್ತೊಂದು ಬೋಟ್ನಲ್ಲಿ ತೆರಳಿದ ಕೊಡಗು ಜಿಲ್ಲಾಧಿಕಾರಿ ಸತೀಶ್ ಖುದ್ದು ರಕ್ಷಣಾ ಕಾರ್ಯಚರಣೆ ವೀಕ್ಷಿಸಿದರು. ಸ್ವತಃ ಜಿಲ್ಲಾಧಿಕಾರಿಯೇ ನೀರಿಗೆ ಬಿದ್ದಿದ್ದು, ಅವರನ್ನು ರಕ್ಷಣೆ ಮಾಡಿದ್ದು ರೋಚಕವಾಗಿತ್ತು. ಜಿಲ್ಲೆಗೆ ಎನ್.ಡಿ.ಆರ್.ಎಫ್ ತಂಡ ಆಗಮಿಸಿದ ನಂತರ ಲ್ಯಾಂಡ್ ಸ್ಲೈಡ್ ಏರಿಯಾದಲ್ಲೂ ಪ್ರಾತ್ಯಕ್ಷಿಕೆ ನಡೆಸಲು ಜಿಲ್ಲಾಡಳಿತ ಸಿದ್ಧವಾಗಿದೆ.