ಕೊಡಗು: ಅಸ್ಸೋಂ ಮೂಲದ ತಾಯಿ ಹಾಗೂ ಮಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಬೈಗೋಡಿನಲ್ಲಿ ನಡೆದಿದೆ.
ಅಸ್ಸೋಂ ಮೂಲದ ಅಪರಿಚಿತ ಇಬ್ಬರು ಮಹಿಳೆಯರ ಮೃತ ದೇಹಗಳು, ಬೈಗೋಡು ಗ್ರಾಮದ ಬಾವಿಯೊಂದರಲ್ಲಿ ಪತ್ತೆಯಾಗಿವೆ. ಜನವರಿ 19 ರಂದು ತಾಯಿ ಮಗಳು ನಾಪತ್ತೆಯಾಗಿದ್ದರು. ಮಹಿಳೆಯರು ಬೈಗೋಡಿನ ಮನು ಎಂಬುವರ ತೋಟಕ್ಕೆ ಕೆಲಸಕ್ಕೆ ವಾರದ ಹಿಂದೆಯಷ್ಟೇ ಬಂದಿದ್ದರು ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಗೆ ಎರಡೂ ಶವಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಂಡನೇ ಕೊಲೆ ಮಾಡಿ ಬಾವಿಗೆ ಹಾಕಿರಬಹುದು ಎನ್ನುವ ಸಂಶಯಗಳು ವ್ಯಕ್ತವಾಗಿದೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.