ETV Bharat / state

ಪ್ರಸಿದ್ಧ ಐತಿಹಾಸಿಕ ಮಡಿಕೇರಿ ದಸರಾಗೆ ಅದ್ಧೂರಿ ತೆರೆ: ಪುರಾಣ ಕಥೆಗಳ ಸಾರುವ ದಶಮಂಟಪಗಳ ಶೋಭಾಯಾತ್ರೆ - ಸ್ತಬ್ಧಚಿತ್ರ

ದಸರಾ ಮೆರವಣಿಗೆಯಲ್ಲಿ ಮಡಿಕೇರಿಯ ವಿವಿಧ ದೇವಾಲಯಗಳ ಮಂಟಪಗಳು ಸ್ತಬ್ಧಚಿತ್ರಗಳ ಮೂಲಕ ಪುರಾಣ ಪ್ರಸಿದ್ಧ ಕಥೆಗಳನ್ನು ಪ್ರದರ್ಶಿಸಿದವು.

Procession of Dashamantapas
ಪುರಾಣ ಕಥೆಗಳ ಸಾರುವ ದಶಮಂಟಪಗಳ ಶೋಭಾಯಾತ್ರೆ
author img

By ETV Bharat Karnataka Team

Published : Oct 25, 2023, 11:16 AM IST

Updated : Oct 25, 2023, 12:44 PM IST

ಪ್ರಸಿದ್ಧ ಐತಿಹಾಸಿಕ ಮಡಿಕೇರಿ ದಸರಾಗೆ ಅದ್ಧೂರಿ ತೆರೆ

ಮಡಿಕೇರಿ: ಮೈಸೂರು ದಸರಾದಂತೆಯೇ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ಹಿನ್ನೆಲೆ ಇರುವ ಮಂಜಿನ ನಗರಿ ಮಡಿಕೇರಿ ದಸರಾ ಮಂಗಳವಾರ ರಾತ್ರಿ ಅದ್ಧೂರಿ ಮೆರವಣಿಗೆ ಮೂಲಕ ಸಂಪನ್ನಗೊಂಡಿತು. ಮಡಿಕೇರಿಯಲ್ಲಿ ನಡೆದ ದಶಮಂಟಪಗಳ ಶೋಭಯಾತ್ರೆಗೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದು, ದಶಮಂಟಪಗಳ ಸ್ತಬ್ಧಚಿತ್ರಗಳು ಪುರಾಣ ಪ್ರಸಿದ್ಧ ಕಥೆಗಳ ಸಾರಾಂಶ ಹೇಳುವ ಧ್ವನಿ ಮತ್ತು ಬೆಳಕಿನ ಮೂಲಕ ಗತಕಾಲದ ವೈಭವನ್ನು ಸಾರುತ್ತಿದ್ದವು. ನಗರದಲ್ಲೆಡೆ ಈ ಸ್ತಬ್ಧಚಿತ್ರಗಳ ಪ್ರದರ್ಶನವೂ ನಡೆಯಿತು.

ಮಹಾಗಣಪತಿಯಿಂದ ಶತಮಹಿಷಿಯ ಸಂಹಾರ, ವೈಕುಂಠ ದರ್ಶನ, ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ, ಶಿವನಿಂದ ತ್ರಿಪುರಾಸುರ ಸಂಹಾರ, ಮಹಾದೇವನಿಂದ ಜಲದಂರನ ವಧೆ, ಕದಂಬ ಕೌಶಿಕೆ ಈ ರೀತಿಯ ಪುರಾಣದ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯಿತು. ಲಕ್ಷಾಂತರ ಜನರು ನಗರದ ವಿವಿಧೆಡೆ ದಶಮಂಟಪಗಳ ಪ್ರದರ್ಶನವನ್ನು ವೀಕ್ಷಿಸಿದರು.

Procession of Dashamantapas
ಪುರಾಣ ಕಥೆಗಳ ಸಾರುವ ದಶಮಂಟಪಗಳ ಶೋಭಾಯಾತ್ರೆ

ಮಡಿಕೇರಿಯಲ್ಲಿನ ದಸರಾದಲ್ಲಿ ದೇವಲೋಕವೇ ಸೃಷ್ಟಿಯಾಗಿತ್ತು. ಒಂದೊಂದು ಮಂಟಪವು ಅಹೋರಾತ್ರಿ‌ ನಡೆದ ಶೋಭಾಯಾತ್ರೆಯಲ್ಲಿ ನೃತ್ಯಗಳ ಮೂಲಕ ಪೌರಾಣಿಕ ಕಥಾ ಸಾರಾಂಶವನ್ನು ಸಾದರಪಡಿಸುತ್ತಿದ್ದರೆ, ಸೇರಿದ್ದ ಲಕ್ಷಾಂತರ ಜನರು ಮೂಕ ವಿಸ್ಮಿತರಾಗಿ ನೋಡುತ್ತಿದ್ದರು. ಯುವ ಸಮೂಹವು ರಾತ್ರಿಯಿಡೀ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿ ಮಡಿಕೇರಿ ದಸರಾ ಹಬ್ಬವನ್ನು ಸಂಭ್ರಮಿಸಿದರು.

ಮಡಿಕೇರಿ ದಸರಾ ಹಬ್ಬಕ್ಕೆ ಗತಕಾಲದ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗಿದೆ. 1781ರಿಂದ 1809ರವರೆಗೆ ಕೊಡಗಿನಲ್ಲಿ ಆಳ್ವಿಕೆ ಮಾಡಿದ ದೊಡ್ಡವೀರ ರಾಜೇಂದ್ರ ಒಡೆಯರ್, ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರು ಎನ್ನುವುದು ಇತಿಹಾಸ.

ಮಡಿಕೇರಿ ದಸರಾ ವೀಕ್ಷಿಸಲು ಬಂದಂತಹ ಲಕ್ಷಾಂತರ ಜನರಿಗೆ ವಿವಿಧ ದೇವಾಲಯಗಳ ವೈವಿಧ್ಯಮಯ ಮಂಟಪಗಳನ್ನು ನಿರ್ಮಾಣ ಮಾಡಿ, ವಿದ್ಯುತ್ ದೀಪಾಲಂಕಾರ ಮಾಡಿ, ಪೂಜಾ ವಿಧಿ ವಿಧಾನಗಳನ್ನು ಮುಗಿಸಿ ಜನಸಾಗರದೊಂದಿಗೆ ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ರಾತ್ರಿಯಿಂದಲೇ ಶೋಭಾಯಾತ್ರೆ ಪ್ರಾರಂಭವಾಗಿತ್ತು.

ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವ 150 ವರ್ಷದ ಇತಿಹಾಸ ಇರುವ ಪೇಟೆ ಶ್ರೀರಾಮ ಮಂದಿರ, ದೇಚೂರು ಶ್ರೀರಾಮ ಮಂದಿರ, ದಂಡಿನ ಮಾರಿಯಮ್ಮ ದೇವಾಲಯ, ಚೌಡೇಶ್ವರಿ ದೇವಾಲಯ, ಕಂಚಿ ಕಾಮಾಕ್ಷಿ ದೇವಾಲಯ, ಕುಂದುರುಮೊಟ್ಟೆ ಚಾಮುಂಡೇಶ್ವರಿ ದೇವಾಲಯ, ಕೋಟೆ ಮಾರಿಯಮ್ಮ ದೇವಾಲಯ, ಕೋಟೆ ಗಣಪತಿ ದೇವಾಲಯ, ಮಲ್ಲಿಕಾರ್ಜುನ ಶ್ರೀ ರಾಮ ಮಂದಿರ, ಕರವಾಲೆ ಭಗವತಿ ದೇವಾಸ್ಥಾನಗಳ ಮಂಟಪಗಳು ತಮ್ಮ ತಮ್ಮ ಕಲಾ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ನಗರ ಬೀದಿಗಳಲ್ಲಿ ಸಾಗಿದವು. ಈ ಮೂಲಕ ಎಲ್ಲಾ ಮನೆಗಳಿಂದ ಪೂಜೆಯನ್ನು ಸ್ವೀಕರಿಸಿ ಬೆಳಗಿನ ನಂತರ ರಾಜರ ಗದ್ದುಗೆಯ ಬಳಿ ಇರುವ ಬನ್ನಿ ಮಂಟಪದಲ್ಲಿ ನಾಲ್ಕು ಕರಗಗಳ ಸಮೇತ ಬನ್ನಿ ಕಡಿದು ಪೂಜೆ ಸಲ್ಲಿಸಿ ತಮ್ಮ ತಮ್ಮ ದೇವಾಲಯಗಳಿಗೆ ಹಿಂದಿರುಗುತ್ತವೆ. ಹಾಗೆಯೇ ಶೋಭಾಯಾತ್ರೆ ಮಾಡಿ ಮುಂಜಾನೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಈ ವರ್ಷದ ಮಡಿಕೇರಿಯ ದಸರಾಕ್ಕೆ ತೆರೆ ಎಳೆಯಲಾಯಿತು.

ಇದನ್ನೂ ಓದಿ: ಜಂಬೂಸವಾರಿ ಮೆರವಣಿಗೆಗೆ ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರುಗು: ವಿಡಿಯೋ

Last Updated : Oct 25, 2023, 12:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.