ETV Bharat / state

ಸಿ.ಟಿ. ರವಿ ಕಿಲಾಡಿ, 4 ಸ್ಥಾನ ಕೊಟ್ಟರೂ ನಿಭಾಯಿಸುತ್ತಾರೆ: ಸಚಿವ ಸೋಮಣ್ಣ - ಸಚಿವ ಸೋಮಣ್ಣ ಸಮರ್ಥನೆ

ಸಿ.ಟಿ. ರವಿ ಬುದ್ಧಿವಂತ ಇದ್ದಾರೆ. 4 ಸ್ಥಾನಗಳನ್ನು ಕೊಟ್ಟರೂ ನಿಭಾಯಿಸುತ್ತಾರೆ ಎಂದು ಸಚಿವ ಸೋಮಣ್ಣ ಸಮರ್ಥಿಸಿಕೊಂಡಿದ್ದಾರೆ.

ಸಚಿವ ವಿ. ಸೋಮಣ್ಣ
author img

By

Published : Oct 3, 2020, 2:23 PM IST

ಕೊಡಗು: ಸಚಿವ ಸಿ.ಟಿ.ರವಿ ನನಗಿಂತ ಬುದ್ಧಿವಂತ ಇದ್ದಾರೆ.‌ ಅವರು ಬಹಳ ಕಿಲಾಡಿ ಇದ್ದಾರೆ, ಎರಡಲ್ಲ ನಾಲ್ಕು ಸ್ಥಾನಗಳನ್ನು ಕೊಟ್ಟರು ನಿಭಾಯಿಸುತ್ತಾರೆ ಎಂದು ಸಚಿವ ವಿ. ಸೋಮಣ್ಣ ಸಮರ್ಥಿಸಿಕೊಂಡಿದ್ದಾರೆ.

ಸಿ.ಟಿ. ರವಿ ಬುದ್ಧಿವಂತ ಇದ್ದಾರೆ: ಸಚಿವ ಸೋಮಣ್ಣ ಸಮರ್ಥನೆ.

ಮೇಲಿನವರಿದ್ದಾರೆ ಎಲ್ಲವನ್ನು ಅವರು ನಿರ್ಧರಿಸುತ್ತಾರೆ.‌ ‌ಸಿ.ಟಿ.ರವಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶೀಸುತ್ತೇನೆ ಎಂದರು. ಹಾಗೆಯೇ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಟೆಸ್ಟ್‌ಗಳನ್ನು ಹೆಚ್ಚಿಗೆ ಮಾಡುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಆದರೆ ಡೆತ್ ರೇಟ್ ತುಂಬಾ ಕಡಿಮೆ ಇದೆ.‌ ನಾನೂ ಕೂಡ ಬೆಂಗಳೂರಿನಲ್ಲಿದ್ದೇನೆ. ಆರೇಳು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೋಡುತ್ತಿದ್ದೇನೆ. ಇನ್ನು ಒಂದೂವರೆ ತಿಂಗಳಲ್ಲಿ ಕೋವಿಡ್ ತಹಬದಿಗೆ ಬರಲಿದೆ.‌ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯ ಸರ್ಕಾರ ಚೆನ್ನಾಗಿ ನಿಭಾಯಿಸುತ್ತಿದೆ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.