ETV Bharat / state

ಕೋವಿಡ್ ಆತಂಕ: ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ - ಈಟಿವಿ ಭಾರತ ಕನ್ನಡ

ಹೊಸ ವರ್ಷ ಮತ್ತು ವಾರಾಂತ್ಯಗಳಲ್ಲಿ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕೋವಿಡ್​ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸಿ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯ ಸೇರಿ ವಿವಿಧ ನಿಯಮಗಳನ್ನು ಜಾರಿಗೊಳಿಸಲಾಗಿದೆ

covid-alert-in-kodagu-tourist-places
ಕೋವಿಡ್ ಆತಂಕ : ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ
author img

By

Published : Dec 28, 2022, 5:55 PM IST

ಕೋವಿಡ್ ಆತಂಕ : ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ

ಕೊಡಗು : ಕೋವಿಡ್​​ ಹಿನ್ನೆಲೆ ರಾಜ್ಯ ಸರ್ಕಾರ ಮತ್ತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ನಿಯಮಗಳನ್ನು ಜಾರಿಗೊಳಿಸಿದೆ. ಸದ್ಯ ದೇಶದಲ್ಲಿ ಮತ್ತೆ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿರುವುದರಿಂದ ರಾಜ್ಯಾದ್ಯಂತ ಹೆಚ್ಚಿನ ನಿಗಾ ವಹಿಸಲಾಗಿದೆ. ಅಂತೆಯೇ ಕೊಡಗು ಜಿಲ್ಲೆಯಲ್ಲೂ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್​​ ಹಿನ್ನೆಲೆ ಕೊಡಗಿನ ಹೋಂ ಸ್ಟೇ, ರೆಸಾರ್ಟ್​, ಪ್ರವಾಸಿ ತಾಣಗಳು, ಹೋಟೆಲ್​ಗಳಲ್ಲಿ ಮಾಸ್ಕ್​​ ಕಡ್ಡಾಯಗೊಳಿಸಲಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಜಲ ಪ್ರಳಯ ಹಾಗೂ ಕೋವಿಡ್​ನಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ತತ್ತರಿಸಿದೆ. ಇನ್ನೇನು ಇದರಿಂದ ಚೇತರಿಕೊಳ್ಳುತ್ತಿರುವ ಈ ಸಮಯದಲ್ಲಿ ಮತ್ತೆ ಕೊರೊನಾ ಜನರನ್ನು ಕಾಡುತ್ತಿದೆ.

ಪ್ರವಾಸೋದ್ಯಮಕ್ಕೆ ಹೊಡೆತ ಸಾಧ್ಯತೆ : ವೀಕೆಂಡ್​ ಮತ್ತು ಹೊಸ ವರ್ಷದ ಆಚರಣೆಗೆ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಸಲವೂ ಕೊಡಗಿನ ಬಹುತೇಕ ಎಲ್ಲ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳು ಭರ್ತಿಯಾಗಿವೆ. ಇನ್ನು ಕೋವಿಡ್​ ಹಿನ್ನಲೆ ಸರ್ಕಾರ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದರೆ ಇಲ್ಲಿನ ಪ್ರವಾಸೋದ್ಯಮಕ್ಕೆ ಮತ್ತೆ ಹೊಡೆತ ಬೀಳುವ ಆತಂಕ ಶುರುವಾಗಿದೆ. ಅಲ್ಲದೇ ಕೊಡಗಿಗೆ ಹೆಚ್ಚು ಪ್ರವಾಸಿಗರು ಆಗಮಿಸುವುದರಿಂದ ಸ್ಥಳೀಯರಿಗೆ ಕೊರೊನಾ ಭೀತಿ ಎದುರಾಗಿದೆ.

ಇನ್ನು ಕೊಡಗು ಜಿಲ್ಲೆ ನೆರೆಯ ರಾಜ್ಯ ಕೇರಳದೊಂದಿಗೆ ಮೂರು ಗಡಿಭಾಗವನ್ನು ಹಂಚಿಕೊಂಡಿದೆ. ಗಡಿ ಭಾಗದಲ್ಲಿಯೂ ಜಿಲ್ಲಾಡಳಿತ ಮುಂಜಾಗ್ರತ ಕ್ರಮಗಳನ್ನು ವಹಿಸಿದ್ದು, ವಿದೇಶಿ ಪ್ರವಾಸಿಗರ ಮೇಲೂ ಸರ್ಕಾರ ನಿಗಾ ವಹಿಸಿದೆ‌.

ಸಾರ್ವಜನಿಕರಲ್ಲಿ ಕೋವಿಡ್​ ನಿಯಮಗಳನ್ನು ಪಾಲಿಸುವಂತೆ ಮನವಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸತೀಶ್​​, ಸರ್ಕಾರದಿಂದ ಕೋವಿಡ್​ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಮೂರನೇ ಡೋಸ್​ ವಾಕ್ಸಿನೇಷನ್​ ತೆಗೆದುಕೊಳ್ಳುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಇನ್ನು ಗಡಿ ಜಿಲ್ಲೆಗಳಲ್ಲಿ ಬೇಕಾದ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುತ್ತದೆ. ಜನರು ಕೋವಿಡ್​ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ವಿಜಯಪುರ: ಕೊರೊನಾ ನಾಲ್ಕನೇ ಅಲೆಯ ಮೊದಲ ಪಾಸಿಟಿವ್ ಪ್ರಕರಣ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.