ಕೊಡಗು: ಕೊರೊನಾ ಸೋಂಕಿತ ವ್ಯಕ್ತಿ ತಾನು ಪ್ರಯಾಣ ಬೆಳೆಸಿದ್ದ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಸೋಂಕಿತ ಸುತ್ತಾಡಿದ್ದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿರುವ ಜಿಲ್ಲಾಡಳಿತ ಆತ ಬೆಂಗಳೂರಿನ ವಿಮಾನ ನಿಲ್ದಾಣದಿಂದ, ಕೆ.ಎ 57 ಎಫ್ 0908 ಸಂಖ್ಯೆಯ ವಾಯು ವಜ್ರ ಬಸ್‌ನಲ್ಲಿ ಮಾರ್ಚ್ 15 ರ ಸಂಜೆ 5.30 ಕ್ಕೆ ಹೊರಟು 6.45 ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿದ್ದ.
![Corona infected person](https://etvbharatimages.akamaized.net/etvbharat/prod-images/kn-kdg-08-20-20-corana-history-av-7207093_20032020194324_2003f_1584713604_89.jpg)
ಸ್ಯಾಟಲೈಟ್ ಬಸ್ ನಿಲ್ದಾಣದಿಂದ KA57 F 0908 ಸಂಖ್ಯೆಯ ರಾಜಹಂಸ ಬಸ್ಸಿನಲ್ಲಿ ಮಾರ್ಚ್ 16ರ ಮುಂಜಾನೆ 12.05 ನಿಮಿಷಕ್ಕೆ ಹೊರಟು, ಮಂಡ್ಯ- ಮೈಸೂರು ವಿರಾಜಪೇಟೆ ಮಾರ್ಗವಾಗಿ ಮುಂಜಾನೆ ಮಡಿಕೇರಿಗೆ ಬಂದಿದ್ದ. ಸಹ ಪ್ರಯಾಣಿಕರು ಈ ಬಸ್‌ನಲ್ಲಿ ಸಂಚರಿಸಿದ್ದರೆ ಕೂಡಲೇ ಆರೋಗ್ಯ ತಪಾಸಣೆಗೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಮನವಿ ಮಾಡಿದ್ದಾರೆ.