ಕೊಡಗು: ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 95ಕ್ಕೇರಿದೆ.
ಮಹಾರಾಷ್ಟ್ರದಿಂದ ಬಂದಿದ್ದ ಕುಶಾಲನಗರ ಮೂಲದ 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಕೊವೀಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇರಂಬಾಣೆ ಮೂಲದ 77 ವರ್ಷದ ವೃದ್ಧೆಗೆ ಸೋಂಕು ತಗಲಿದ್ದು, ಇವರು ಮೈಸೂರಿನಿಂದ ಹಿಂದಿರುಗಿದ್ದರು. ಪೆರಂಬಾಡಿ ಗ್ರಾಮದ ಸೋಂಕಿತರ 8 ವರ್ಷದ ಮಗಳಿಗೂ ಕೊರೊನಾ ತಗುಲಿದೆ.
ಚೇರಂಬಾಣೆಯಲ್ಲಿ ಕಂಟೈನ್ಮೆಂಟ್ ಝೋನ್ ತೆರೆದಿದ್ದು, ಸೋಂಕಿನಿಂದ 16 ಮಂದಿ ಗುಣಮುಖರಾಗಿದ್ದಾರೆ. ಸದ್ಯ 78 ಸಕ್ರಿಯ ಪ್ರಕರಣಗಳಿದ್ದು, 37 ಕಂಟೈನ್ಮೆಂಟ್ ವಲಯಗಳಾಗಿವೆ. ಇದುವರೆಗೂ ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.