ETV Bharat / state

'ಕರ್ನಾಟಕದ ಕಾಶ್ಮೀರ' ಪ್ರವಾಸಿಗರಿಗೆ ಮುಕ್ತ: ಕೊಡಗಿನ ಸೌಂದರ್ಯ ಸವಿಯಲು ಬರುತ್ತಿದ್ದಾರೆ ಜನ - ಕೊಡಗು'

ಕೊರೊನಾ ಹಿನ್ನೆಲೆಯಲ್ಲಿ ಬಂದ್​ ಆಗಿದ್ದ ಕೊಡಗಿನ ಪ್ರವಾಸಿ ತಾಣಗಳು ಇದೀಗ ತೆರೆದುಕೊಂಡಿವೆ. ಸದ್ಯ ಪ್ರವಾಸಿಗರು ಕರ್ನಾಟಕದ ಕಾಶ್ಮೀರದೆಡೆಗೆ ಮುಖ ಮಾಡಿದ್ದಾರೆ.

'ಕರ್ನಾಟಕ ಕಾಶ್ಮೀರ' ಪ್ರವಾಸಿಗರ ಮುಕ್ತ
'ಕರ್ನಾಟಕ ಕಾಶ್ಮೀರ' ಪ್ರವಾಸಿಗರ ಮುಕ್ತ
author img

By

Published : Sep 7, 2020, 11:56 AM IST

ಕೊಡಗು: ಕೊರೊನಾ ಮಹಾಮಾರಿ ನಿಯಂತ್ರಿಸುವುದಕ್ಕಾಗಿ ದೇಶವನ್ನು ಸರ್ಕಾರ ಲಾಕ್‌ಡೌನ್ ಮಾಡಿತ್ತು. ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಪ್ರವಾಸಿ ಸ್ಥಳಗಳು ಕೂಡ ಸ್ಥಬ್ಧವಾಗಿದ್ದವು. ಐದು ತಿಂಗಳ ಬಳಿಕ ಮತ್ತೆ ಪ್ರಾರಂಭವಾಗಿದ್ದು, ಪ್ರವಾಸಿಗರಿಗೆ ಮುಕ್ತವಾಗಿವೆ. ಹೀಗಾಗಿ ಕೊಡಗಿನ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡಿದ್ದಾರೆ.

ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್‍ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಪ್ರಾಕೃತಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಎಂಟ್ರಿ ಕೊಟ್ಟಿದ್ದ ಕೊರೊನಾ ವೈರಸ್​ನಿಂದಾಗಿ ದೇಶವೇ ಲಾಕ್​ಡೌನ್ ಆಗಿತ್ತು. ಹಂತ ಹಂತವಾಗಿ ಲಾಕ್‌ಡೌನ್ ತೆರವು ಮಾಡಿದಂತೆ ಜಿಲ್ಲೆಯ ಪ್ರವಾಸಿ ತಾಣಗಳು ಓಪನ್ ಆಗಿವೆ. ಇಲ್ಲಿರುವ ಅಬ್ಬಿ ಜಲಪಾತ, ನಿಸರ್ಗಧಾಮ, ರಾಜಾಸೀಟ್ ಸೇರಿದಂತೆ ಹತ್ತಾರು ಪ್ರವಾಸಿತಾಣಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಕೊಡಗಿನಲ್ಲಿ ಇನ್ನೂ ಸಾಧಾರಣ ಮಳೆಯಾಗುತ್ತಿರುವುದರಿಂದ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಸೋಮವಾರಪೇಟೆ ತಾಲೂಕಿನ ಚಿಕ್ಲಿಹೊಳೆ ಜಲಾಶಯ ಕೂಡ ತುಂಬಿ ಹರಿಯುತ್ತಿದ್ದು, ಪ್ರವಾಸಿಗರ ಮನಸೂರೆಗೊಳಿಸುತ್ತಿದೆ. ಮೋಡ ಕವಿದ ವಾತಾವರಣದಿಂದ ಬೆಟ್ಟಗುಡ್ಡಗಳ ಮೇಲೆ ಮಂಜು ಕವಿದು ಪ್ರವಾಸಿ ತಾಣಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಐದು ತಿಂಗಳಿನಿಂದ ಮನೆಯಲ್ಲೇ ಇದ್ದ ಜನರು ಕೊಡಗಿತ್ತ ಮುಖ ಮಾಡಿದ್ದು ಎಂಜಾಯ್ ಮಾಡುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದ್ದ ಪರಿಣಾಮ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಹೀಗಾಗಿ ಕಳೆದ ವರ್ಷ ವಾರಗಳ ಕಾಲ ಪ್ರವಾಸಿ ಉತ್ಸವ ಮಾಡಿ ಕೊಡಗಿನತ್ತ ಪ್ರವಾಸಿಗರನ್ನು ಸೆಳೆಯಲಾಗಿತ್ತು. ಈ ಬಾರಿ ಪ್ರಾಕೃತಿಕ ವಿಕೋಪದ ಜೊತೆಗೆ ಕೊರೊನಾ ಮಹಾಮಾರಿಯಿಂದಾಗಿ ದೇಶವೇ ಲಾಕ್​ಡೌನ್ ಆಗಿದ್ದರಿಂದ ಪ್ರವಾಸೋದ್ಯಮ ಸಂಪೂರ್ಣ ನಷ್ಟದಲ್ಲಿದೆ. ಹೀಗಾಗಿ ಪ್ರವಾಸಿಗರನ್ನು ಸೆಳೆಯಲು ಈ ಬಾರಿಯೂ ಪ್ರವಾಸಿ ಉತ್ಸವ ಆಚರಿಸಲು ಚಿಂತಿಸಲಾಗುತ್ತಿದೆ. ಅಕ್ಟೋಬರ್ ತಿಂಗಳ ಕೊನೆಯಷ್ಟರಲ್ಲಿ ಕೊರೊನಾ ಕಡಿಮೆಯಾಗುವ ಸಾಧ್ಯತೆ ಇದ್ದು, ಹಾಗಾದಲ್ಲಿ ಈ ವರ್ಷವೂ ಪ್ರವಾಸಿ ಉತ್ಸವ ಆಚರಿಸಿ ಪ್ರವಾಸಿಗರನ್ನು ಸೆಳೆಯಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.