ಕೊಡಗು: ಜೂನ್ 21ರ ವರೆಗೂ ಕೊಡಗು ಜಿಲ್ಲೆಯಲ್ಲಿ ಲಾಕ್ ಡೌನ್ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಜಿಲ್ಲಾಡಳಿತ ಈ ಹಿಂದೆ ಹೊರಡಿಸಿರುವ ಮಾರ್ಗ ಸೂಚಿ ಮುಂದುವರೆಯಲಿದ್ದು, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ6 ರಿಂದ ಮಧ್ಯಾಹ್ನ 1 ಗಂಟೆವರೆಗೆ ಅವಕಾಶ ನೀಡಲಾಗಿದ್ದು, ಲಾಕ್ ಡೌನ್ ಇನ್ನೂ ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ಮುಂದುವರೆಯಲಿದೆ ಎಂದು ಹೇಳಿದ್ರು.
ಇದೇ ವೇಳೆ ಜಿಲ್ಲೆಯಲ್ಲಿ ಕೊವಿಡ್ ಸೋಂಕಿನ ಸಂಖ್ಯೆಯನ್ನು ಆದಷ್ಟ ಬೇಗ ಶೂನ್ಯಕ್ಕೆ ಇಳಿಸುವಂತೆ ಎಲ್ಲ ಅಧಿಕಾರಿ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಬೇಕೆಂದು ಮನವಿ ಮಾಡಿದರು. ಇನ್ನು ಮುಂಗಾರು ಆರಂಭವಾಗಿದ್ದು, ಮಳೆಗಾಲದ ಕುರಿತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸಭೆ ನಡೆಸಿದರು.
ಮಳೆಗಾಲ ಆರಂಭವಾದ ಹಿನ್ನೆಲೆ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಅಪಾಯದ ಅಂಚಿನಲ್ಲಿ ವಾಸಿಸುತ್ತಿರುವವರನ್ನು ಶೀಘ್ರವೇ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಸೂಚಿಸಲು ಜಿಲ್ಲಾಧಿಕಾರಿಗೆ ಸೂಚಿದ ಅವರು, ಕಾಳಜಿ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿದ ನಂತರ ಆಶ್ರಯ ನೀಡಬೇಕೆಂದು ಆದೇಶ ಮಾಡಿದ್ರು.
ನದಿ ಹಂಚಿನಲ್ಲಿ ವಾಸ ಮಾಡುವ ಜನರಿಗೆ ನೋಟಿಸ್ ನೀಡಿ ಸುರಕ್ಷತಾ ಸ್ಥಳಗಳಿಗೆ ತರೆಳುವಂತೆ ನೋಡಿಕೊಳ್ಳಬೇಕು ಕಳೆದ ಬಾರಿ ಸಂಭವಿಸಿದ ವಿಕೋಪದ ಅನಾಹುತಗಳಂತೆ ಈ ಬಾರಿ ಅನಾಹುತಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎನ್ ಡಿ ಆರ್ ಎಫ್ ತಂಡಗಳನ್ನು ಈಗಾಗಲೆ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ. ಜನರು ಭಯ ಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು.
ಕೊವಿಡ್ ಸೋಂಕು ತಗುಲಿದ ವ್ಯಕ್ತಿಯನ್ನು ಹೋಂ ಕ್ವಾರೆಂಟೈನ್ ಮಾಡುವ ವಿಚಾರವಾಗಿ ಮಾತನಾಡಿದ ಸಚಿವರು. ಸುಸಜ್ಜಿತ ವ್ಯವಸ್ಥೆ ಇರುವ ಮನೆಗಳಲ್ಲಿ ಮಾತ್ರ ಹೋಮ್ ಕ್ವಾರೈಂಟೆನ್ ಮಾಡಿಸಿ . ಇಲ್ಲವಾದಲ್ಲಿ ಕೊವಿಡ್ ಸೆಂಟರ್ ಗೆ ಸೊಂಕಿತರನ್ನು ಕಳುಹಿಸಿ ಆರೈಕೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.