ಕೊಡಗು: ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಈ ವೈದ್ಯ ಕರ್ತವ್ಯದಲ್ಲಿದ್ದುಕೊಂಡೆ ಕಂಠಪೂರ್ತಿ ಕುಡಿದು ರೋಗಿಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾಗಿ ವಿಡಿಯೋ ವೊಂದು ವೈರಲ್ ಆಗಿದೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಗಾಯಗೊಂಡ ರೋಗಿಯೊಬ್ಬರನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಡಾ.ಶಿವಕುಮಾರ್ ಎಂಬ ವೈದ್ಯರೊಬ್ಬರ ಕರ್ತವ್ಯದಲ್ಲಿದ್ದರು.
ಚಿಕಿತ್ಸೆ ನೀಡಿದ ವೈದ್ಯರ ಬಳಿ ರೋಗಿಯ ಕಡೆಯವರು ಔಷಧಿಯ ಚೀಟಿಯನ್ನು ಕೇಳಿದ್ದಾರೆ. ಅದಕ್ಕೆ ಆ ವೈದ್ಯ ಚೀಟಿ ಓರಿಜಿನಲ್ ಕೊಡಲ್ಲ. ಜೆರಾಕ್ಸ್ ಕೋಡುತ್ತೀವಿ ಅಂದ್ರು, ಅಷ್ಟಕ್ಕೆ ಸುಮ್ಮನಾಗದ ಅವರು ಏಕೆ ಸರ್ ಓರಿಜಿನಲ್ ಚೀಟಿ ಕೊಡಲ್ಲ ಎಂದು ಕೇಳಿದ್ದಾರೆ. ನನ್ನದು ಎಮ್ಎಸ್ಸಿ ಆಗಿದೆಯಪ್ಪಾ, ಜೆರಾಕ್ಸ್ ಕೊಟ್ಟು ನಾವು ಓರಿಜಿನಲ್ ಇಟ್ಟುಕೊಳ್ಳಬೇಕು ಎಂದಿದ್ದಾರೆ.
ವೈದ್ಯರ ವಿಚಿತ್ರ ವರ್ತನೆ ಕಂಡು ಆಸ್ಪತ್ರೆಯಲ್ಲಿದ್ದವರು ವೈದ್ಯರು ಮದ್ಯಪಾನ ಮಾಡಿದ್ದು, ಹೀಗೆ ಎಣ್ಣೆ ಕುಡಿದುಕೊಂಡಿದ್ರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತಾರೆ ಎಂದು ರೋಗಿ ಕಡೆಯವರು ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಭಾಷಣೆಯ ವಿಡಿಯೋ ಈಗ ವೈರಲ್ ಆಗಿದೆ.