ETV Bharat / state

ತಲಕಾವೇರಿಯಲ್ಲಿ ಕೇರಳ ಯುವಕರ ಪುಂಡಾಟಿಕೆ: ಜಗಳ ಬಿಡಿಸಲು ಬಂದ ಭಕ್ತನ ಕೈ ಬೆರಳು ಮುರಿತ

author img

By

Published : Nov 16, 2020, 3:49 PM IST

ಕೊಡಗಿನ ಪವಿತ್ರ ತಲಕಾವೇರಿ ಕ್ಷೇತ್ರದಲ್ಲಿ ಕೇರಳದ ಪ್ರವಾಸಿ ಯುವಕರ ಗುಂಪೊಂದು ಪುಂಡಾಟ ಮೆರೆದಿದೆ. ಗಲಭೆಯಲ್ಲಿ ಜಗಳ ಬಿಡಿಸಲು ಬಂದ ಭಕ್ತನ ಕೈ ಬೆರಳು ಮುರಿದಿದ್ದಾರೆ ಎಂದು ತಿಳಿದು ಬಂದಿದೆ.

Clashes in Talacauvery from Kerala tourists
ಕೈ ಬೆರಳು ಮುರಿದುಕೊಂಡ ಭಕ್ತ

ತಲಕಾವೇರಿ (ಕೊಡಗು): ಮಾಸ್ಕ್ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಕೇರಳದ ಪ್ರವಾಸಿ ಯುವಕರ ಗುಂಪೊಂದು ದೇವಾಲಯದ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾಗಿರುವ ಘಟನೆ ತಲಕಾವೇರಿಯಲ್ಲಿ‌ ನಡೆದಿದೆ.

ತಲಕಾವೇರಿಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.‌ ಜಗಳ ಬಿಡಿಸಲು ಮುಂದಾದ ಭಕ್ತ ರಾಕೇಶ್ ದೇವಯ್ಯ ಅವರ ಕೈ ಬೆರಳನ್ನು ಮುರಿದಿದ್ದಾರೆ ಎಂದು ದೂರಿದ್ದಾರೆ.

ನಿನ್ನೆ ಸಂಜೆ ತಲಕಾವೇರಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ಮಾಸ್ಕ್ ಹಾಕುವಂತೆ ಹೇಳಿದಕ್ಕೆ ಘರ್ಷಣೆ ನಡೆದಿದೆ ಎನ್ನಲಾಗುತ್ತಿದೆ. ಕ್ಷೇತ್ರದ ಭದ್ರತಾ ಸಿಬ್ಬಂದಿ ಮತ್ತು ದಕ್ಷಿಣ ಕೊಡಗಿನ ಹಲವು ಭಕ್ತರು ಎಚ್ಚರಿಕೆ ನೀಡಿದರೂ ಯುವಕರು ಪುಂಡಾಟಿಕೆ ಮೆರೆದಿದ್ದಾರೆ.‌

ಕೈ ಬೆರಳು ಮುರಿದುಕೊಂಡ ಭಕ್ತ

ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.‌ ದಾಂಧಲೆಯಲ್ಲಿ ನಿರತರಾಗಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಡುರಾತ್ರಿ ಹತ್ತು ಮಂದಿ ಪುಂಡರ ವಿರುದ್ಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.