ETV Bharat / state

ಸೇನಾಧಿಕಾರಿಗಳ ಸಾವಿನಲ್ಲಿ ವಿಕೃತ ಸಂಭ್ರಮ.. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಾಪ್​​ ಸಿಂಹ ಆಗ್ರಹ

ಹೆಲಿಕಾಪ್ಟರ್​​​ ದುರಂತದಿಂದ ಇಡೀ ದೇಶವೇ ಸಂಕಟ, ನೋವಿನಲ್ಲಿದೆ. ಈ ನಡುವೆ ಅದನ್ನು ಸಂಭ್ರಮಿಸುವುದನ್ನು ಕಂಡಾಗ ಬೇಸರ ಆಗುತ್ತದೆ. ಅಂತವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸಂಸದ ಪ್ರತಾಪ್​​ ಸಿಂಹ ಆಗ್ರಹಿಸಿದ್ದಾರೆ.

MP  Pratap simha
ಸಂಸದ ಪ್ರತಾಪ್​​ ಸಿಂಹ
author img

By

Published : Dec 11, 2021, 7:37 AM IST

ಮಡಿಕೇರಿ(ಕೊಡಗು): ಸೇನಾಧಿಕಾರಿಗಳ ಸಾವಿನಲ್ಲಿ ವಿಕೃತ ಸಂಭ್ರಮ ಪಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಪ್ರತಾಪ್​​ ಸಿಂಹ ಆಗ್ರಹಿಸಿದ್ದಾರೆ.

ಸೇನಾಧಿಕಾರಿಗಳ ಸಾವಿನಲ್ಲಿ ವಿಕೃತ ಸಂಭ್ರಮಾಚರಣೆ ವಿಚಾರ-ಸಂಸದ ಪ್ರತಾಪ್​​ ಸಿಂಹ ಪ್ರತಿಕ್ರಿಯೆ..

ಪರಿಷತ್​ ಚುನಾವಣೆ ಹಿನ್ನೆಲೆ ಶುಕ್ರವಾರ ಮಡಿಕೇರಿಯಲ್ಲಿ ಮತ ಚಲಾಯಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಹ್ಯ ಶತ್ರುಗಳಿಗಿಂತ ಆಂತರಿಕ ಶತ್ರುಗಳು ಹೆಚ್ಚು ಅಪಾಯಕಾರಿ. ಹೆಲಿಕಾಪ್ಟರ್​​​ ದುರಂತವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ದೇಶದ್ರೋಹಿಗಳು ಬಿಂಬಿಸುತ್ತಿದ್ದಾರೆ. ಅವರು ಯಾವತ್ತಿಗೂ ನಮ್ಮ ದೇಶಕ್ಕೆ ಅಪಾಯಕಾರಿ ಎಂದು ಕಿಡಿಕಾರಿದರು.

ಇಡೀ ದೇಶವೇ ಸಂಕಟ, ನೋವಿನಲ್ಲಿದೆ. ಈ ನಡುವೆ ಅದನ್ನು ಸಂಭ್ರಮಿಸುವುದನ್ನು ಕಂಡಾಗ ಬೇಸರ ಆಗುತ್ತದೆ. ಅಂತವರ ವಿರುದ್ಧ ಕಠಿಣ ಕ್ರಮ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.