ಕೊಡಗು: ನಗರದ ಹಳೇ ಕೋಟೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಈ ನಾಡಿನ ಜನರು ಶೂರರು, ವೀರರು, ತ್ಯಾಗಿಗಳು, ಸ್ವಾಭಿಮಾನಿಗಳು, ಸಜ್ಜನರು, ಶಾಂತಿ ಪ್ರಿಯರು ಹಾಗೂ ಚಿಂತಕರು ಆಗಿದ್ದಾರೆ. ಶ್ರೀಮಂತ ಪರಂಪರೆಯುಳ್ಳ ನಮ್ಮ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮೆಲ್ಲರ ಹೊಣೆ. ಕರುನಾಡ ಜನರ ಮನಸ್ಸಿನಲ್ಲಿ ಕನ್ನಡಾಭಿಮಾನದ ಬೀಜವನ್ನು ಬಿತ್ತುವುದರ ಮೂಲಕ ಕನ್ನಡ ನಾಡಿನ ಗರಿಮೆಯನ್ನು ಇನ್ನೂ ಉತ್ತುಂಗಕ್ಕೇರಿಸಲು ಎಲ್ಲಾ ಕನ್ನಡಿಗರು ಪ್ರಯತ್ನಿಸಬೇಕಿದೆ ಎಂದು ಕಿವಿಮಾತು ನೀಡಿದ್ರು.
ನಗರದ ಗಾಂಧಿ ಮಂಟಪದ ಬಳಿ ಸ್ತಬ್ಧಚಿತ್ರದ ಮೆರವಣಿಗೆ ನಡೆಸಲಾಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರೋಳಿ, ಪಶುಪಾಲನಾ ಉಪ ನಿರ್ದೇಶಕ ತಮ್ಮಯ್ಯ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಪೌರಾಯುಕ್ತ ಎಂ.ಎಲ್.ರಮೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಉಪಸ್ಥಿತರಿದ್ದರು.