ETV Bharat / state

ಕೋವಿಡ್ ಆತಂಕ : ಕೊಡಗು-ಕೇರಳ ‌ನಡುವೆ ಬಸ್ ಸಂಚಾರ ಬಂದ್

ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಜಿಲ್ಲೆ ಕೊಡಗು ಮತ್ತು ಕೇರಳ ನಡುವಿನ ಬಸ್​ ಸಂಚಾರ ಸ್ಥಗಿತಗೊಳಿಸಲಾಗಿದೆ.

Restriction in Kodagu
ಕೊಡಗು-ಕೇರಳ ‌ನಡುವೆ ಬಸ್ ಸಂಚಾರ ಬಂದ್
author img

By

Published : Aug 8, 2021, 1:24 PM IST

ಕೊಡಗು : ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಳವಾದ ಹಿನ್ನೆಲೆ ಕೊಡಗು-ಕೇರಳ ‌ನಡುವೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಜಿಲ್ಲೆಗೆ ಆಗಮಿಸುತ್ತಿರುವ ಕಾರಣ ಕೋವಿಡ್ ಹರಡುವ ಭೀತಿಯಿದೆ. ಈ ಕಾರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಕೊಡಗಿನಿಂದ ಯಾವುದೇ ಬಸ್​ಗಳು ಕೇರಳಕ್ಕೆ ತೆರಳುವಂತಿಲ್ಲ ಮತ್ತು ಕೇರಳದಿಂದಲೂ ಕೊಡಗಿಗೆ ಬಸ್​​ಗಳು ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

ಓದಿ : RT-PCR Report ಇಲ್ಲದೆ ಬಂದವರಿಗೆ ಹುಬ್ಬಳ್ಳಿಯಲ್ಲಿ ಕ್ವಾರಂಟೈನ್

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡಿರುವ ಕಾರಣ ಜಿಲ್ಲೆಯ ಗಡಿಗಳಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಚೆಕ್ ಪೋಸ್ಟ್​ಗಳಲ್ಲಿ ಪೊಲೀಸ್ ಕಣ್ಗಾವಲು ಇಡಲಾಗಿದ್ದು, ಆರ್​ಟಿಪಿಸಿಆರ್​ ನೆಗೆಟಿವ್ ವರದಿ ಹೊಂದಿರುವವರನ್ನು ಮಾತ್ರ ಜಿಲ್ಲೆಯೊಳಗೆ ಬಿಡಲಾಗ್ತಿದೆ. ಹಾಗಾಗಿ, ಚೆಕ್​ಪೋಸ್ಟ್​ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವೀಕೆಂಡ್​ನಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.