ETV Bharat / state

ಗುಂಡಿಗೆ ಬಲಿಯಾದ ಅಡಿಕೆ ಕಳ್ಳ ಮಾಲೀಕನ ಕೈಗೆ ಸಿಕ್ಕಿ ಹಾಕಿಕೊಳ್ಳಲು ಕಾರಣವಾಯ್ತು ಡಬ್ಬದ ಸೌಂಡ್​! - Madikeri

ಅಡಿಕೆ ಕದಿಯಲು ಹೋದ ಸಂದರ್ಭದಲ್ಲಿ ಮನೆ ಮಾಲೀಕನ ಗುಂಡೇಟಿಗೆ ಕಳ್ಳ ಬಲಿಯಾಗಿರುವ ಘಟನೆ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ಮನೆ ಮಾಲೀಕ ಕಳ್ಳನನ್ನು ಸೆರೆಹಿಡಿಯಲು ಬಳಸಿದ ಉಪಾಯವೇ ಇಂಟರೆಸ್ಟಿಂಗ್ ಆಗಿದೆ.

ಪೊಲೀಸರಿಂದ ಸ್ಥಳ ಪರಿಶೀಲನೆ
author img

By

Published : Aug 30, 2019, 7:57 PM IST

ಕೊಡಗು: ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಅಡಿಕೆ ದಾಸ್ತಾನು ಕಳವು ಮಾಡಲು ಬಂದಿದ್ದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಬಗ್ಗೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಅಷ್ಟಕ್ಕೂ ಮನೆ ಮಾಲೀಕನ ಕೈಗೆ ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ ಎಂಬ ಚರ್ಚೆಗಳು ಆರಂಭವಾಗಿದೆ.

ಪೊಲೀಸರ ಪ್ರಕಾರ, ನಿನ್ನೆ ರಾತ್ರಿ ಸುಮಾರು 12:40 ಸಮಯದಲ್ಲಿ ಕರಿಕೆ ಗ್ರಾಮದ ಎಳ್ಳುಕೊಚ್ಚಿಯ ಮಂದೋಡಿ ಹೊನ್ನಣ್ಣ ಎಂಬವರ ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನು ಇರಿಸಿದ್ದ ಒಣ ಅಡಿಕೆ ಚೀಲಗಳು ಕೆಲವು ದಿನಗಳಿಂದ ಕಳವಾಗುತ್ತಿದ್ದವು. ಈ ಬಗ್ಗೆ ಮಾಲೀಕರು ನಿನ್ನೆ ದಿನ ಎಚ್ಚೆತ್ತುಕೊಂಡು ದಾಸ್ತಾನು ಕೊಠಡಿ ಬಾಗಿಲಿಗೆ ಒಂದು ಹಗ್ಗವನ್ನು ಕಟ್ಟಿ ತನ್ನ ಮಲಗುವ ಕೊಠಡಿಗೆ ತಾಕುವಂತೆ ಟಿನ್​ ಡಬ್ಬ ಕಟ್ಟಿದ್ದರು.

ಪೊಲೀಸರಿಂದ ಸ್ಥಳ ಪರಿಶೀಲನೆ

ಕಳ್ಳತನಕ್ಕೆ ಬಂದ ಸಂದರ್ಭದಲ್ಲಿ ತಡರಾತ್ರಿ ಬಾಗಿಲು ತೆರೆದಾಗ ಡಬ್ಬದ ಶಬ್ದವಾಗಿದೆ. ಮಾಲೀಕರು ಹೊರಬಂದು ನೋಡಿದಾಗ ಮುಸುಕುದಾರಿ ವ್ಯಕ್ತಿಯೊಬ್ಬ ಅಂಗಳದಲ್ಲಿ ಅಡಿಕೆ ಮೂಟೆ ಹೊತ್ತುಕೊಂಡು ಬರುವುದನ್ನು ಗಮನಿಸಿ ಕೂಗಿಕೊಂಡಾಗ ಮುಸುಕು ದಾರಿ ವ್ಯಕ್ತಿ ಅಡಿಕೆ ಚೀಲ ಕೆಳಹಾಕಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಮಾಲೀಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ತಮ್ಮ ಬಳಿಯಿದ್ದ ಬಂದೂಕಿನಿಂದ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದು ಗುಂಡು ಆತನ ಎಡ ತೊಡೆಗೆ ತಗುಲಿ ಸ್ಥಳದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಘಟನೆ ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದಾಗ ಗುಂಡೇಟಿಗೆ ಬಲಿಯಾದ ವ್ಯಕ್ತಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ದೇವಂಗೋಡಿ ಗಣೇಶ ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಹೊನ್ನಣ್ಣ ಹಾಗೂ ಗುಂಡು ಹಾರಿಸಿದ ಒಂಟಿ ನಳಿಕೆಯ ಬಂದೂಕುನ್ನು ವಶಕ್ಕೆ ಪಡೆದಿದ್ದಾರೆ. ಮೃತ ಗಣೇಶ್ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಸೇರಿದಂತೆ ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಠಾಣೆಯಲ್ಲಿ ಹಲವು ಕಳ್ಳತನ ಪ್ರಕರಣಗಳನ್ನು ಎದುರಿಸುತ್ತಿದ್ದು, ಈತನ ಮೇಲೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ, ಸುಳ್ಯ ಠಾಣೆಯಲ್ಲಿ ಎರಡು ಸೇರಿದಂತೆ ಕೇರಳ ರಾಜ್ಯದಲ್ಲಿ ಕೂಡ ಪ್ರಕರಣ ದಾಖಲಾಗಿರುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಾಲೀಕ ಹೊನ್ನಣ್ಣ ಅವರ ಮನೆಯಲ್ಲಿ ಸುಮಾರು ಹತ್ತು ಚೀಲಗಳಷ್ಟು ಅಡಿಕೆ ನಾಪತ್ತೆಯಾಗಿರುವ ಬಗ್ಗೆ ನಿನ್ನೆ ಅವರಿಗೆ ತಿಳಿದಿದೆ. ಇನ್ನು ಹೊನ್ನಣ್ಣ ಅವರ ಮನೆಯಲ್ಲಿ ವಯಸ್ಕ ದಂಪತಿಗಳು ವಾಸವಿದ್ದರು. ಅವರ ಮಗ ಬೆಂಗಳೂರಿನಲ್ಲಿ ವಾಸವಿರುವ ಬಗ್ಗೆ ಖಚಿತವಾದ ಮಾಹಿತಿಯನ್ನು ತಿಳಿದು ಈ ಕೃತ್ಯಕ್ಕೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.

ಮೃತರ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕೃತ್ಯದ ಅಪರಾಧಿಗಳ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿದೆ. ಅಲ್ಲದೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಡಿಕೇರಿಗೆ ರವಾನಿಸಿ ನಂತರ ಕಾನೂನಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೆಕರ್ ತಿಳಿಸಿದ್ದಾರೆ.

Intro:ಕಳ್ಳತನಕ್ಕೆ ಯತ್ನಿಸಿ ಗುಂಡೇಟಿಗೆ ಬಲಿ: ಅಡಿಕೆಗೆ ಕಳ್ಳತನ ಹಾರಿಹೋದ ಪ್ರಾಣ..!

ಕೊಡಗು: ಅಡಿಕೆ ದಾಸ್ತಾನು ಕಳವು ಮಾಡುತ್ತಿದ್ದ ವ್ಯಕ್ತಿಗೆ ಗುಂಡೇಟು ತಗುಲಿ ಸ್ಥಳದಲ್ಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಡಿಭಾಗವಾದ ಕರಿಕೆ ಗ್ರಾಮದ ಎಳ್ಳುಕೊಚ್ಚಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಸುಮಾರು 12:40 ಸಮಯದಲ್ಲಿ ಕರಿಕೆ ಗ್ರಾಮದ ಮಂದೋಡಿ ಹೊನ್ನಣ್ಣ ಎಂಬವರ ಮನೆಯ ಕೊಟ್ಟಿಗೆಯಲ್ಲಿ ದಾಸ್ತಾನು ಇರಿಸಿದ್ದ ಒಣ ಅಡಿಕೆ ಚೀಲಗಳು ಕೆಲವು ದಿನಗಳಿಂದ ಕಳವಾಗುತ್ತಿದ್ದವು.ಈ ಬಗ್ಗೆ ಮಾಲೀಕರು ನಿನ್ನೆ ದಿನ ಎಚ್ಚೆತ್ತುಕೊಂಡು ದಾಸ್ತಾನು ಕೊಠಡಿ ಬಾಗಿಲಿಗೆ ಒಂದು ಹಗ್ಗವನ್ನು ಕಟ್ಟಿ ತನ್ನ ಮಲಗುವ ಕೊಠಡಿಯ ಬಳಿ ಶಬ್ದ ಬರುವಂತೆ ವ್ಯವಸ್ಥೆ ಮಾಡಿ ಮಲಗಿದ್ದರು.

ಕಳ್ಳತನಕ್ಕೆ ಬಂದ ಸಂದರ್ಭದಲ್ಲಿ ತಡರಾತ್ರಿ ಬಾಗಿಲು ತೆರೆದಾಗ ಶಬ್ದವಾಗಿದೆ. ಮಾಲೀಕರು ಹೊರಬಂದು ನೋಡಿದಾಗ ಮುಸುಕುದಾರಿ ವ್ಯಕ್ತಿಯೊಬ್ಬ ಅಂಗಳದಲ್ಲಿ ಅಡಿಕೆ ಮೂಟೆ ಹೊತ್ತುಕೊಂಡು ಬರುವುದನ್ನು ಗಮನಿಸಿ ಬೊಬ್ಬಿಟ್ಟಾಗ ಮುಸುಕು ದಾರಿ ವ್ಯಕ್ತಿ ಅಡಿಕೆ ಚೀಲ ಕೆಳಹಾಕಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಮಾಲೀಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.ಈ ಸಂದರ್ಭದಲ್ಲಿ ತಮ್ಮ ಬಳಿಯಿದ್ದ ಬಂದೂಕಿನಿಂದ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದು ಗುಂಡು ಆತನ ಎಡ ತೊಡೆಗೆ ತಗುಲಿ ಸ್ಥಳದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಘಟನೆ ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದಾಗ ಗುಂಡೇಟಿಗೆ ಬಲಿಯಾದ ವ್ಯಕ್ತಿ
ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ದೇವಂಗೋಡಿ ಗಣೇಶ ಎಂದು ಗೊತ್ತಾಗಿದೆ. ನಂತರ ಪೊಲೀಸರು ಹೊನ್ನಣ್ಣ ಹಾಗೂ ಗುಂಡು ಹಾರಿಸಿದ ಒಂಟಿ ನಳಿಕೆಯ ಬಂದೂಕುನ್ನು ವಶಕ್ಕೆ ಪಡೆದಿದ್ದಾರೆ.

ಮೃತ ಗಣೇಶ್ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಸೇರಿದಂತೆ ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಠಾಣೆಯಲ್ಲಿ ಹಲವು ಕಳವು ಪ್ರಕರಣ ಎದುರಿಸುತ್ತಿದ್ದು, ಈತನ ಮೇಲೆ
ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ, ಸುಳ್ಯ ಠಾಣೆಯಲ್ಲಿ ಎರಡು ಸೇರಿದಂತೆ ಕೇರಳ ರಾಜ್ಯದಲ್ಲಿ ಕೂಡ ಪ್ರಕರಣ ದಾಖಲಾಗಿವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಾಲೀಕ ಹೊನ್ನಣ್ಣ ಅವರ ಮನೆಯಲ್ಲಿ ಸುಮಾರು ಹತ್ತು ಚೀಲಗಳಷ್ಟು ಅಡಿಕೆ ನಾಪತ್ತೆಯಾಗಿರುವ ಬಗ್ಗೆ ನೆನ್ನೆ ಅವರಿಗೆ ತಿಳಿದಿದ್ದ ಮನೆಯಲ್ಲಿ ಈ ವಯಸ್ಕ ದಂಪತಿಗಳು ವಾಸವಿದ್ದರು.
ಮಗ ಬೆಂಗಳೂರಿನಲ್ಲಿ ವಾಸವಿರುವ ಬಗ್ಗೆ ಖಚಿತವಾದ ಮಾಹಿತಿಯನ್ನು ತಿಳಿದು ಈ ಕೃತ್ಯಕ್ಕೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.

ಮೇಲ್ನೋಟಕ್ಕೆ ಇದೊಂದು ಕಳ್ಳತನ ಮಾಡುವಾಗ ಘಟನೆ ನಡೆದಿರುವುದಾಗಿ ವ್ಯಕ್ತವಾಗಿದೆ. ಮೃತರ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕೃತ್ಯ ಬಗ್ಗೆ ಅಪರಾಧಿಗಳ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿದ್ದು, ಅಲ್ಲದೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗೆ ಮಡಿಕೇರಿಗೆ ರವಾನಿಸಿ ನಂತರ ಕಾನೂನಿನನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೆಕರ್ ತಿಳಿಸಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

ಬೈಟ್-1 ಸುಮಾನ್ ಡಿ. ಪನ್ಬೇಕರ್, ಕೊಡಗು ಎಸ್ಪಿBody:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.