ETV Bharat / state

ಮಡಿಕೇರಿ: ಕಾಫಿತೋಟದಲ್ಲಿ ಪುರಾತನ ಕಾಲದ ಚಿನ್ನಾಭರಣ ಪತ್ತೆ, ವಶಕ್ಕೆ ಪಡೆದ ಸರ್ಕಾರ - ETV Bharat Kannada News

ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪುರಾತನ ಕಾಲದ ಚಿನ್ನಭರಣ ಮತ್ತು ನಿಧಿ ಪತ್ತೆಯಾಗಿದೆ.

ಪುರಾತನ ಚಿನ್ನಭರಣ
ಪುರಾತನ ಚಿನ್ನಭರಣ
author img

By ETV Bharat Karnataka Team

Published : Nov 14, 2023, 11:10 AM IST

ಮಡಿಕೇರಿ (ಕೊಡಗು) : ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪುರಾತನ ಚಿನ್ನಾಭರಣ ಮತ್ತು ನಿಧಿ ಸಿಕ್ಕಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರದ ಅಮ್ಮತಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ನಡೆದಿದೆ. ಕಾಫಿ ತೋಟದ ನಡುವೆ ಇರುವ ದೇವಾಲಯದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುವ ವೇಳೆ ಪುರಾತನ ಚಿನ್ನಾಭರಣ ಮತ್ತು ನಿಧಿ ದೊರೆತಿದ್ದು, ನಿಯಮಾನುಸಾರ ಸರ್ಕಾರಕ್ಕೆ ಒಪ್ಪಿಸಲಾಗಿದೆ.

ತೋಟದಲ್ಲಿ ಪುರಾತನ ಕಾಲದ ಈಶ್ವರ ದೇವಸ್ಥಾನದ ಬಳಿ ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭ ಭೂಮಿಯ ಅಡಿಯಲ್ಲಿ ಪ್ರಾಚಿನ ಕಾಲದ ಕೆಲ ವಸ್ತುಗಳು ಪತ್ತೆಯಾಗಿವೆ. ಅದರೊಳಗೆ ಚಿನ್ನದ ಆಭರಣಗಳು, ಹಳೆಯ ಕಾಲದ ಉಂಗುರ, ಖಡ್ಗ ಸೇರಿದಂತೆ ಪ್ರಾಚೀನ ಕಾಲದ ಆಭರಣಗಳು ಪತ್ತೆಯಾಗಿವೆ.

ಇನ್ನು ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಹಾಗೂ ತಹಶೀಲ್ದಾರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಆಭರಣಗಳನ್ನು ವಿರಾಜಪೇಟೆ ತಹಶೀಲ್ದಾರ್ ವಶಕ್ಕೆ ನೀಡಲಾಗಿದ್ದು, ಪ್ರಾಚ್ಯವಸ್ತು ಇಲಾಖೆಗೆ ನೀಡಿ ಸಂಶೋಧನೆಯ ಬಳಿಕ ಇದು ಎಷ್ಟು ವರ್ಷಳ ಹಿಂದಿನ ಆಭರಣಗಳೆಂಬುದು ತಿಳಿದುಬರಲಿದೆ.

ಇದನ್ನೂ ಓದಿ : ನಿಧಿ ಆಸೆಗೆ ಆಂಜನೇಯ ದೇವಾಲಯದ ಗರ್ಭಗುಡಿಯಲ್ಲೇ ಗುಂಡಿ ಅಗೆದರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.