ETV Bharat / state

ಸೋಮವಾರಪೇಟೆ: ಯಡವನಾಡು ಅರಣ್ಯದಲ್ಲಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ

ಯಡವನಾಡುವಿನ ಅರಣ್ಯದಲ್ಲಿ ಸ್ಥಳ ಪರಿಶೀಲನೆಗೆ ತೆರಳಿದಾಗ ಕ್ರಿ.ಶ. 15 ಮತ್ತು 16 ನೇ ಶತಮಾನಕ್ಕೆ ಸೇರಿದ ಶಾಸನ ಪತ್ತೆಯಾಗಿದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ಬಿ.ಪಿ.ರೇಖಾ  ತಿಳಿಸಿದ್ದಾರೆ.

An inscription of the Vijayanagara period in yadavanadu
ಸೋಮವಾರಪೇಟೆ: ಯಡವನಾಡು ಅರಣ್ಯದಲ್ಲಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ
author img

By

Published : May 28, 2020, 12:21 AM IST

ಸೋಮವಾರಪೇಟೆ: ತಾಲೂಕಿನ ಯಡವನಾಡು ಬಳಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆಯಾಗಿದೆ.

ಮೂರು ಪಟ್ಟಿಕೆಗಳಿರುವ ಶಿಲ್ಪವಾಗಿದ್ದು, ಮೂವರು ವೀರರಿಗೂ ಎದುರು ಇರುವ ಇಬ್ಬರು ವೀರರಿಗೂ ಹೋರಾಟದ ದೃಶ್ಯವಿದೆ. ಇವರಲ್ಲಿ ಇಬ್ಬರು ಅಶ್ವಾರೋಹಿಗಳಾಗಿದ್ದು ಕೈಯಲ್ಲಿ ಈಟಿಯಂತಹ ಆಯುಧಗಳಿವೆ. ಇನ್ನಿಬ್ಬರು ಯೋಧರ ಕೈಯಲ್ಲಿ ಖಡ್ಗ, ಗುರಾಣಿಗಳಿವೆ. ಉಳಿದೊಬ್ಬ ಬಿಲ್ಲಿಗೆ ಬಾಣಹೂಡಿ ಬಿಡುತ್ತಿದಾನೆ. ಎಲ್ಲರೂ ಚಲನೆಯ ಸ್ಥಿತಿಯಲ್ಲಿರುವ ಶಾಸನ ಪತ್ತೆಯಾಗಿದೆ.

ಮಧ್ಯದ ಪಟ್ಟಿಕೆಯಲ್ಲಿ ಮೃತ ವೀರ ಪುಷ್ಪಕ ವಿಮಾನದಲ್ಲಿ ಕುಳಿತ ಭಂಗಿಯಲ್ಲಿದ್ದು, ಉಭಯ ಪಾರ್ಶ್ವಗಳಲ್ಲಿ ಚಾಮರ ಧಾರಿಣಿ ಅಪ್ಸರೆಯರು ಆಕಾಶದಲ್ಲಿ ಹಾರುವಂತೆ ಚಿತ್ರಿತವಾಗಿದೆ. ಮೊದಲ ಪಟ್ಟಿಕೆಯಲ್ಲಿ ಚಂದ್ರ, ಸೂರ್ಯ, ಬಸವ ಸ್ತಂಭ ಶಿವಲಿಂಗ ಕೈ ಮುಗಿದು ಕುಳಿತಿರುವ ವ್ಯಕ್ತಿ ಹಾಗೂ ಕಳಸ ಕೆತ್ತನೆಗಳಿವೆ. ಶಾಸನ ಶಿಲೆ ತುಂಬ ಸವೆದು ಹೋಗಿದ್ದು, ಲಿಪಿ ಲಕ್ಷಣಗಳನ್ನು ಆಧರಿಸಿ 15-16 ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಬಹುದಾಗಿದೆ. ಯಾವುದೇ ರಾಜವಂಶ ಅಥವಾ ಅರಸ ಪಾಳೇಗಾರರ ಉಲ್ಲೇಖವಿಲ್ಲ ಎಂದು ರೇಖಾ ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.