ETV Bharat / state

ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ರೆ ಮಾಲೀಕರ ವಿರುದ್ಧ ಕ್ರಮ: ಶಾಸಕ ಅಪ್ಪಚ್ಚು ರಂಜನ್​ - ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಸುಂಟಿಕೊಪ್ಪ ಮಾರ್ಗವಾಗಿ ಉಡುಪಿಯಿಂದ ಅಸ್ಸಾಂಗೆ ಕಾಲ್ನಡಿಯಲ್ಲಿ ಕಾರ್ಮಿಕರ ತಂಡವೊಂದು ಪ್ರಯಾಣ ಬೆಳಸಿದೆ. ಸೇವಾ ಸಿಂಧು ಪಾಸ್ ದೊರೆಯದ ಹಿನ್ನೆಲೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಾವಿರಾರು ಕಿ.ಮೀ. ನಡೆದೇ ಊರು ಸೇರುವ ಧಾವಂತದಲ್ಲಿದ್ದಾರೆ.

Action against employers for not properly treating workers
ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ರೆ ಮಾಲೀಕರ ವಿರುದ್ಧ ಕ್ರಮ: ಶಾಸಕ ಅಪ್ಪಚ್ಚು ರಂಜನ್
author img

By

Published : May 11, 2020, 9:31 PM IST

ಕೊಡಗು: ತಂಡೋಪತಂಡವಾಗಿ ವಲಸೆ ಕಾರ್ಮಿಕರು ಅಂತರ್ ಜಿಲ್ಲೆಗಳಿಂದ ಹುಟ್ಟೂರಿಗೆ ಗಂಟು-ಮೂಟೆ ಕಟ್ಟಿಕೊಂಡು ಜಿಲ್ಲೆಯ ಮೂಲಕ ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಸುಂಟಿಕೊಪ್ಪ ಮಾರ್ಗವಾಗಿ ಉಡುಪಿಯಿಂದ ಅಸ್ಸಾಂಗೆ ಕಾಲ್ನಡಿಯಲ್ಲಿ ಕಾರ್ಮಿಕರ ತಂಡವೊಂದು ಪ್ರಯಾಣ ಬೆಳಸಿದೆ. ಸೇವಾ ಸಿಂಧು ಪಾಸ್ ದೊರೆಯದ ಹಿನ್ನೆಲೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಾವಿರಾರು ಕಿ.ಮೀ. ನಡೆದೇ ಊರು ಸೇರುವ ಧಾವಂತದಲ್ಲಿದ್ದಾರೆ. ಇನ್ನು ಕಾರ್ಮಿಕರ ವಲಸೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅಪ್ಪಚ್ಚು ರಂಜನ್, ಕಾರ್ಮಿಕರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವೆ.‌

ಅವರಿಗೆ ಸರ್ಕಾರದಿಂದಲೂ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಮಾಲೀಕರು ಮೊದಲು ಕಾರ್ಮಿಕರನ್ನು ರಕ್ಷಣೆ ಮಾಡಬೇಕು. ವಾರದಲ್ಲಿ ಅವರಿಗೆ ಕನಿಷ್ಠ 4 ದಿನಗಳಾದರೂ ಕೆಲಸ ಕೊಡಬೇಕು. ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದ ಮಾಲೀಕರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.