ETV Bharat / state

ಗ್ರಾಮಸ್ಥರು,ಅಂಗನವಾಡಿ ಸಹಾಯಕಿ ಜಗಳ; ಜಾತಿಯೋ,ಕಳ್ಳತನವೋ..? ಹೀಗೊಂದು ಸಮಸ್ಯೆ - kodagu district anganavadi news

ಅಂಗನವಾಡಿ ಸಹಾಯಕಿಗೆ ಕಳ್ಳತನದ ಆರೋಪ ಹೊರಿಸಿರುವ ಗ್ರಾಮಸ್ಥರು, ನಮ್ಮೂರಿಗೆ ಆ ಸಹಾಯಕಿ ಬೇಡವೇ ಬೇಡ. ಅವರನ್ನು ಬದಲಿಸುವವರೆಗೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲ್ಲ ಎಂದು ಹಟ ಹಿಡಿದಿರುವುದರಿಂದ ಅಂಗನವಾಡಿ ಬಿಕೋ ಎನ್ನುತ್ತಿದೆ.

ನವಗ್ರಾಮ ಅಂಗನವಾಡಿ ಕೇಂದ್ರ
author img

By

Published : Sep 17, 2019, 10:55 PM IST

ಕೊಡಗು : ಅಂಗನವಾಡಿ ಕೇಂದ್ರದ ಸಹಾಯಕಿ 'ಕೆಳಜಾತಿ'ಗೆ ಸೇರಿದವಳು ಎಂದು ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಸಮೀಪದ ನವಗ್ರಾಮದಲ್ಲಿ ನಡೆದಿದೆ.

ಅಂಗನವಾಡಿ ಸಹಾಯಕಿಗೆ ಕಳ್ಳತನದ ಆರೋಪ ಮಾಡಿರುವ ಗ್ರಾಮಸ್ಥರು ನಮ್ಮೂರಿಗೆ ಆ ಸಹಾಯಕಿ ಬೇಡವೇ ಬೇಡ. ಅವರನ್ನು ಬದಲಿಸುವವರೆಗೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲ್ಲ ಎಂದು ಹಟ ಹಿಡಿದಿರುವುದರಿಂದ ಅಂಗನವಾಡಿ ಬಿಕೋ ಎನ್ನುತ್ತಿದೆ. ಮಕ್ಕಳಿಗೆ ಕೊಡಬೇಕಾದ ವಸ್ತುಗಳೆಲ್ಲ ಆಕೆ ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲದೆ ಸರಿಯಾದ ಸಮಯಕ್ಕೆ ಕೆಲಸಕ್ಕೂ ಬರುವುದಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಜಾತಿ ನಿಂದನೆಯ ಆರೋಪ ಮಾಡುತ್ತಾರೆ ಎನ್ನುತ್ತಿದ್ದಾರೆ.

ಗ್ರಾಮಸ್ಥರು ಮತ್ತು ಅಂಗನವಾಡಿ ಸಹಾಯಕಿ ಜಗಳ

ಆದರೆ ಇದನ್ನು ಅಲ್ಲಗಳೆದಿರುವ ಅಂಗನವಾಡಿ ಸಹಾಯಕಿ ಶಾಂತಾ, ನಾನು ಕೆಳ ಜಾತಿಗೆ ಸೇರಿದವಳು ಎಂಬ ಕಾರಣಕ್ಕೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಕೆಲಸಕ್ಕೆ ಬಾರದಂತೆ ಅಂಗನವಾಡಿ ಶಿಕ್ಷಕಿಯೂ ಕೂಡ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಹದಿನೈದು ಕೆ.ಜಿ.ಯಷ್ಡು ಅಕ್ಕಿಯನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ತರಲು ಆಗುತ್ತದೆಯೇ? ಅವರಿಗೆ ನಾನು ಅಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲ ಅಷ್ಟೇ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Intro:ಅಂಗನವಾಡಿ ಸಹಾಯಕಿ ಹಾಗೂ ಗ್ರಾಮಸ್ಥರ ಜಗಳ: ಮಕ್ಕಳಿಗೆ ಎದುರಾಗಿದೆ ಸಂಕಷ್ಟ..!  ಕೊಡಗು: ಸರ್ವರಿಗೂ ಶಿಕ್ಷಣ ಸಿಗಬೇಕು.ವಿದ್ಯಾಭ್ಯಾಸದಿಂದ ಯಾರೂ ಹೊರಗೆ ಉಳಿಯಬಾರದು ಅನ್ನೋದು ಸರ್ಕಾರದ ಆಶಯ.ಈ ಉದ್ದೇಶ ಸಾಧನೆಗೆ ಸರ್ಕಾರವೂ ಕೊಟ್ಯಂತರ ರೂಪಾಯಿಯನ್ನು ಶಾಲೆಗಳು ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳೆಂದೇ ಕರೆಯಲ್ಪಡುವ ಅಂಗನವಾಡಿ ಕೇಂದ್ರಗಳಿಗೆ  ವ್ಯಯ ಮಾಡುತ್ತೆ. ಆದ್ರೆ ಇಲ್ಲೊಂದು ಅಂಗನವಾಡಿ ಕೇಂದ್ರದ ಸಹಾಯಕಿ ಹಾಗೂ ಗ್ರಾಮಸ್ಥರ ನಡುವೆ ಜಾತಿ ಮತ್ತು ಕಳ್ಳತನದ ಆರೋಪ-ಪ್ರತ್ಯಾರೊಪಗಳು ಪ್ರತಿಧ್ವನಿಸಿವೆ.‌ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಸಮೀಪದ ನವಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂತಹದ್ದೊಂದು ಸಮಸ್ಯೆ ತಾರಕಕ್ಕೇರಿದ್ದು,ನಾನು ದಲಿತ ಮಹಿಳೆ ಅನ್ನೊವ ಒಂದೇ ಕಾರಣಕ್ಕೆ ಕೆಲಸಕ್ಕೆ ಬರದಂತೆ ಅಂಗನವಾಡಿ ಶಿಕ್ಷಕಿ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.ಗ್ರಾಮಸ್ಥರೂ ಕೂಡ ನಮ್ಮೂರಿಗೆ ಆ ಸಹಾಯಕಿ ಬೇಡವೇ ಬೇಡ...ಅವರನ್ನು ಬದಲಿಸುವವರೆಗೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲ್ಲ ಎಂದು ಹಟ ಹಿಡಿದಿರುವುದರಿಂದ ಅಂಗನವಾಡಿ ಬಿಕೋ ಅನ್ನೊತ್ತಿದೆ..!! ಮಕ್ಕಳಿಗೆ ಕೊಡಬೇಕಾದ ವಸ್ತುಗಳೆಲ್ಲವನ್ನ ಅವರ ಮನೆಗೆ ತೆಗೆದುಕೊಂಡು ಹೋಗ್ತಾರೆ. ಅಲ್ಲದೆ ಸರಿಯಾದ ಸಮಯಕ್ಕೆ ಕೆಲಸಕ್ಕೂ ಬರುವುದಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ  ಜಾತಿ ವಿರೋಧಿಗಳು ಅನ್ನುತ್ತಿದ್ದಾರೆ. ಅವರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲ್ಲ. ಮಕ್ಕಳನ್ನು ಅವರಿಗಿಂತ ನಾವೇ ಎಷ್ಟೋ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವೆ. ಅವರನ್ನು ಬೇರೆಡೆ ಸ್ಥಳಾಂತರಿಸುವ ವರೆಗೂ ಮಕ್ಕಳನ್ನು ನಾವು ಅಲ್ಲಿಗೆ ಕಳುಹಿಸುವುದಿಲ್ಲ ಅಂತಾರೆ ಗ್ರಾಮಸ್ಥರಾದ ಮಂಜುನಾಥ್. ಬೈಟ್-1 ಮಂಜುನಾಥ್, ನವಗ್ರಾಮ ನಿವಾಸಿ ನಾನು ದಲಿತ ಮಹಿಳೆ ಎನ್ನುವ ಉದ್ದೇಶದಿಂದ ಕೆಲವರು ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ. ಹದುನೈದು ಕೆ.ಜಿ.ಯಷ್ಡು ಅಕ್ಕಿಯನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ತರಲು ಆಗುತ್ತದೆಯೇ ?.ಅವರಿಗೆ ನಾನು ಅಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲ ಅಷ್ಟೆ. ಅದರಲ್ಲಿ ಅಂಗನವಾಡಿ ಶಿಕ್ಷಕಿಯ ಪಾತ್ರವೂ ಪ್ರಮುಖವಾಗಿದೆ. ಅಂಗನವಾಡಿ ಸ್ವಚ್ಛಗೊಳಿಸಿದಾಗ ಸಿಕ್ಕ ಅಕ್ಕಿ ಹಾಗೂ ಟಿಂಚರ್ ಬಾಟಲ್ ಎಸೆಯಲು ಹೋದಾಗ ಅದನ್ನೆ ಹಿಡಿದುಕೊಂಡು ನನ್ನ ವಿರುದ್ಧ ಕಳ್ಳತನದ ಆರೋಪ ಹೊರಿಸಿದ್ದಾರೆ ಎಂದು ಅಳಲು ತೋಡಿಕೊಳ್ತಾರೆ ಅಂಗನವಾಡಿ ಸಹಾಯಕಿ ಶಾಂತಾ. ಬೈಟ್-2 ಶಾಂತಾ, ಅಂಗನವಾಡಿ ಸಹಾಯಕಿ ಒಟ್ಟಿನಲ್ಲಿ ಜಾತಿಯ ವ್ಯಾಮೋಹವೋ ಅಥವಾ ಸಹಾಯಕಿ ಮೇಲೆ ಕೇಳಿ ಬಂದಿರುವ ಕಳ್ಳತನದ ಆರೋಪದಿಂದ ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಅಂಗನವಾಡಿಯಲ್ಲಿ ಆಆಇಈ ಕಲಿಯಬೇಕಿದ್ದ ಪುಟಾಣಿಗಳು ಇದೀಗ ಬೀದಿ ಸುತ್ತುವಂತೆ ಆಗಿದೆ.  - ಕೆ.ಸಿ.ಮಣಿಕಂಠ,ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.