ಕೊಡಗು: ನಾವು ಮಾಸ್ಕ್ ಧರಿಸಿದಾಗ ನಮ್ಮ ಮುಖ ಬೇರೆಯವರಿಗೆ ಸ್ಪಷ್ಟವಾಗಿ ಕಾಣುವುದಿಲ್ಲ. ಹೀಗಾಗಿ ಇಂತಹ ಸಮಸ್ಯೆಗೆ ಪರಿಹಾರವಾಗಿ ಮಡಿಕೇರಿಯ ಸ್ಟುಡಿಯೋ ಒಂದರಲ್ಲಿ ವಿನೂತನ ಮಾಸ್ಕ್ ತಯಾರಿಸಿ ಮಾರಾಟ ಮಾಡಲಾಗ್ತಿದೆ.. ಇದು ಟ್ರೆಂಡಿಂಗ್ ಕೂಡ ಆಗಿರುವುದು ವಿಶೇಷ.
ಫ್ಯಾಷನ್ ಪ್ರಿಯರಿಗಾಗಿ ವಿಭಿನ್ನ ಡಿಸೈನ್ಗಳ ಮಾಸ್ಕ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಇದರ ವಿಶೇಷತೆ ಏನಂದ್ರೆ ಮುಚ್ಚಿರುವ ಮುಖ ಭಾಗದ ಫೋಟೋವನ್ನು ಮಾಸ್ಕ್ ಮೇಲೆ ಪ್ರಿಂಟ್ ಮಾಡಲಾಗುತ್ತೆ. ಇದ್ರಿಂದ ಮಾಸ್ಕ್ ಧರಿಸಿದ್ದರೂ ಎಲ್ಲರೂ ನಿಮ್ಮನ್ನು ಗುರುತಿಸಲು ಸಾಧ್ಯವಾಗಲಿದೆ.
ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಆಶಾ ಡಿಜಿಟಲ್ ಸ್ಟುಡಿಯೋ, ವಿಭಿನ್ನವಾದ ಮಾಸ್ಕ್‌ಗಳನ್ನು ತಯಾರಿಸುತ್ತ ಎಲ್ಲರನ್ನೂ ಆಕರ್ಷಿಸುತ್ತಿದೆ. ಜಿಲ್ಲೆಯಲ್ಲಿ ಮೊದಲು ಇಂತಹ ವಿಭಿನ್ನವಾದ ಮಾಸ್ಕ್‌ಗಳನ್ನು ಸ್ಟುಡಿಯೋ ಮಾಲೀಕರು ತಯಾರಿಸುತ್ತಿದ್ದಾರೆ.
ಹೆಚ್ಚಾಗಿ ಯುವಕರು ಇಂತಹ ಮಾಸ್ಕ್‌ಗಳನ್ನು ಇಷ್ಟಪಡುತ್ತಿದ್ದಾರೆ. ಹಲವರು ನಗು ಮುಖದ ಮಾಸ್ಕ್, ಅವರ ಮುಖದ ಮಾದರಿ ಹೋಲುವ ಮಾಸ್ಕ್ ಸೇರಿದಂತೆ ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ ಹಾಗೂ ಇತರರ ಆರೋಗ್ಯವನ್ನು ಕಾಪಾಡಿ ಎಂಬ ಸಂದೇಶಗಳಿರುವ ಮಾಸ್ಕ್‌ಗಳನ್ನು ಖರೀದಿಸುತ್ತಿದ್ದಾರೆ.
ಗುಣಮಟ್ಟದ ಬಟ್ಟೆ ಬಳಸಿ ತಯಾರಿಸುವ ಡಬಲ್ ಲೇಯರ್ ಮಾಸ್ಕ್‌ಗಳಿಂದ ಸುಲಭವಾಗಿ ಇತರರನ್ನೂ ಗುರುತಿಸಬಹುದು. ಒಂದು ಮಾಸ್ಕ್ ಅನ್ನು 150 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಾಸ್ಕ್‌ಗೆ ಶಾಲಾ ಮಕ್ಕಳಿಂದಲೂ ಬೇಡಿಕೆ ಹೆಚ್ಚಿದೆ.
ಈಗಾಗಲೇ ಸಮುದಾಯ ಸೇರಿದಂತೆ ಬಲು ಬೇಡಿಕೆಯ ಟ್ರೆಂಡ್ ಆಗಿರುವ ಮುಖಗವಸುಗಳಿಗೆ ಬೇಡಿಕೆಯೂ ಬಂದಿದೆ. ಜನರು ಏನೇ ಮಾಡಿದ್ದರೂ ವಿಭಿನ್ನವಾದುದ್ದನ್ನೇ ಇಷ್ಟಪಡ್ತಾರೆ ಎನ್ನುವುದು ಮಾಸ್ಕ್ ತಯಾರಕರ ಅಭಿಪ್ರಾಯವಾಗಿದೆ.