ETV Bharat / state

ಶಾಸಕ ಪ್ರಿಯಾಂಕ್​​ ಖರ್ಗೆ ಅಭಿಮಾನಿಗಳಿಂದ ಹಸಿವು ನೀಗಿಸುವ ಕಾರ್ಯ

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಶಾಸಕ ಪ್ರಿಯಾಂಕ್​​ ಖರ್ಗೆ ಅಭಿಮಾನಿಗಳು ಸಾವಿರಾರು ಬಡ ಕುಟುಂಬಗಳಿಗೆ ವಾರಕ್ಕೆ ಆಗುವಷ್ಟು ದಿನಸಿ ಸಾಮಾಗ್ರಿಗಳ ಪ್ಯಾಕೆಟ್​ಗಳನ್ನು ಮನೆ ಮನೆಗಳಿಗೆ ತೆರಳಿ ವಿತರಿಸುತ್ತಿದ್ದಾರೆ.

Legislator Priyank Kharg's act of appeasement from fans
ಶಾಸಕ ಪ್ರಿಯಾಂಕ್​​ ಖರ್ಗೆ ಅಭಿಮಾನಿಗಳಿಂದ ಹಸಿವು ನೀಗಿಸೋ ಕಾರ್ಯ
author img

By

Published : Apr 1, 2020, 7:09 PM IST

Updated : Apr 2, 2020, 11:44 AM IST

ಕಲಬುರಗಿ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳ ಹಸಿವು ನೀಗಿಸಲು ಮಾಜಿ ಸಚಿವ ಚಿತ್ತಾಪುರ ಶಾಸಕ ಪ್ರಿಯಾಂಕ್​​ ಖರ್ಗೆ ಅಭಿಮಾನಿಗಳು ಮುಂದಾಗಿದ್ದಾರೆ.

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಶಾಸಕರ ಅಭಿಮಾನಿಗಳು ಸಾವಿರಾರು ಬಡ ಕುಟುಂಬಗಳಿಗೆ ವಾರಕ್ಕಾಗುವಷ್ಟು ದಿನಸಿ ಸಾಮಾಗ್ರಿಗಳ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿ ಮನೆ ಮನೆಗಳಿಗೆ ತೆರಳಿ ವಿತರಿಸುತ್ತಿದ್ದಾರೆ.

ಟೀಂ ಪ್ರಿಯಾಂಕ್ ಖರ್ಗೆ ಹಾಗೂ ಭಾಯ್ ಭಾಯ್ ಗ್ರೂಪ್‌ ಮುಖಂಡರಾದ ಶಂಶೀರ್ ಅಹ್ಮದ್ ಹಾಗೂ ಮಹಮ್ಮದ್ ಇಫ್ರಾನ್ ನೇತೃತ್ವದಲ್ಲಿ ವಾಡಿ ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಿಗೂ ತೆರಳಿ ಅಲ್ಲಿರುವ ಬಡ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಒಂದು ವಾರಕ್ಕೆ ಆಗುವಷ್ಟು ಕಿರಾಣಿ ಸಾಮಗ್ರಿ ಸೇರಿದಂತೆ ಆಹಾರ ತಯಾರಿಸಲು ಬೇಕಾದ ಅಗತ್ಯ ವಸ್ತು ಹಾಗೂ ಮಾಸ್ಕ್ ನೀಡುತ್ತಿದ್ದಾರೆ. ಇಲ್ಲಿವರೆಗೂ ಸುಮಾರು 15ನೂರಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ ಪ್ಯಾಕೆಟ್ ವಿತರಿಸಿರುವುದಾಗಿ ತಂಡದ ಮುಖಂಡ ಶಂಶೀರ್ ಅಹ್ಮದ್ ತಿಳಿಸಿದ್ದಾರೆ.

Last Updated : Apr 2, 2020, 11:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.