ಕಲಬುರಗಿ: ಬೈಕ್ ಅಪಘಾತಕ್ಕೀಡಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ನಾಗನಹಳ್ಳಿ ಮೇಲ್ಸೇತುವೆ ಬಳಿ ನಡೆದಿದೆ.
ಶಾಂತಿನಗರದ ನಿವಾಸಿ ಯೂಸುಫ್ ಫಕ್ರುದ್ದೀನ್ (35) ಹಾಗೂ ಹಿಂಬದಿ ಸವಾರ 32 ವರ್ಷದ ಯುವಕ ಮೃತಪಟ್ಟ ದುರ್ದೈವಿಗಳು. ಮೃತ ಹಿಂಬದಿ ಸವಾರನ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.