ಕಲಬುರಗಿ: ಯಡಿಯೂರಪ್ಪ ಆಮಿಷಕ್ಕೊಳಗಾಗಿ ಉಮೇಶ್ ಜಾಧವ್ಗೆ ಟಿಕೆಟ್ ನೀಡಿದ್ದಾರೆಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಮ್ಮನ್ನು ಆಳು ಮಕ್ಕಳಂತೆ ದುಡಿಸಿಕೊಂಡರು.ಬಹಳ ದಿನಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದರೂ ಲೋಕಸಭೆಗೆ ಟಿಕೆಟ್ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದು, ಬೇರೆ ಕಡೆಯಿಂದ ಬಂದವರಿಗೆ ಮಣೆ ಹಾಕ್ಕಿದ್ದಾರೆ. ಬಿಜೆಪಿಯಲ್ಲಿ ಒಬ್ಬರನ್ನು ತುಳಿದು ಇನ್ನೊಬ್ಬರನ್ನು ಕರೆದುಕೊಂಡು ಬರುತ್ತಾರೆ. ನನ್ನನ್ನು ಕರೆದುಕೊಂಡು ಬಂದು ರೇವುನಾಯಕ ಅವರನ್ನು ತುಳಿದರು. ಈಗ ಉಮೇಶ್ ಜಾಧವ್ ಅವರನ್ನು ಕರೆದುಕೊಂಡು ಬಂದು ನನ್ನ ತುಳಿದ್ದಿದ್ದಾರೆ. ಮುಂದೆ ಜಾಧವ್ ಅವರನ್ನ ತುಳಿಯಲು ಬೇರೆ ಯಾರನ್ನ ಕರೆದುಕೊಂಡು ಬರುತ್ತಾರೋ ಗೊತ್ತಿಲ್ಲ ಎಂದರು.
ನಾನು ಮತ್ತು ಸುಭಾಷ್ ರಾಠೋಡ್ ಇದ್ದರೂ ಜಾಧವ್ರನ್ನ ಕರೆದುಕೊಂಡು ಬರುವ ಅವಶ್ಯಕತೆ ಏನಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರನ್ನ ಪ್ರಶ್ನಿಸಿದ್ದಾರೆ.ಸದ್ಯ ನಾನಿನ್ನು ಯಾವ ಪಕ್ಷಕ್ಕೂ ಸೇಪರ್ಡೆ ಆಗಿಲ್ಲ.ನನ್ನ ಮುಂದಿನ ನಡೆ ಬಗ್ಗೆ ಇಷ್ಟರಲ್ಲೇ ತಿಳಿಸುತ್ತೇನೆ ಎಂದಿದ್ದಾರೆ.