ETV Bharat / state

ಯಡಿಯೂರಪ್ಪಗೆ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಇದೆ: ಬಿವೈ ವಿಜಯೇಂದ್ರ ಸ್ಪಷ್ಟನೆ

author img

By

Published : Jan 7, 2023, 10:07 PM IST

ಬಿಜೆಪಿ ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ - ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ - ಪ್ರಿಯಾಂಕ್ ಖರ್ಗೆಗೆ ಟಾಂಗ್

yeddyurappa-has-a-good-status-in-the-bjp-says-by-vijayendra
ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಇದೆ: ಬಿವೈ ವಿಜಯೇಂದ್ರ

ಕಲಬುರಗಿ: ಬಿಜೆಪಿ ಪಕ್ಷ ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ. ಇದೊಂದು ವದಂತಿ ಅಷ್ಟೆ. ಯಡಿಯೂರಪ್ಪನವರು ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನಗರದ ಕಲ್ಲಹಂಗರಗಾ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಕರ್ನಾಟಕ ಮಟ್ಟಿಗೆ ಒಂದು ದೊಡ್ಡ ಶಕ್ತಿ ಎಂಬ ಮಾತನ್ನು ಸ್ವತಃ ಅಮಿತ್ ಶಾ ಮತ್ತು ಜೆಪಿ‌ ನಡ್ಡಾ ಅವರೇ ಅನೇಕ ಬಾರಿ ಹೇಳಿದ್ದಾರೆ.

ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಅವರು ಶ್ರಮಿಸುತ್ತಿದ್ದಾರೆ‌. ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮುಂದಿನ ಬಾರಿ ಬಿಜೆಪಿ 130 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಕಾರ್ಯೊನ್ಮೋಖರಾಗಿದ್ದಾರೆ. ಯಡಿಯೂರಪ್ಪನವರ ಬಗ್ಗೆ ಯಾರಿಗೂ ಯಾವುದೇ ರೀತಿ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದರು.

ಪ್ರಿಯಾಂಕ್ ಖರ್ಗೆಗೆ ಟಾಂಗ್ : ಬಿಜೆಪಿ ಬ್ರೋಕರ್ ಪಾರ್ಟಿ ಮತ್ತು ಬಿಜೆಪಿಯವರು ವಿಧಾನಸೌಧವನ್ನು ಶಾಪಿಂಗ್ ಮಾಲ್ ಮಾಡಿದಾರೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿ.ವೈ ವಿಜಯೇಂದ್ರ ತಿರುಗೇಟು ನೀಡಿದರು. ಪ್ರಿಯಾಂಕ್‌ರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗೆ ಆಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಕಳೆದುಕೊಂಡಿದೆ. ಈ ಹಿಂದೆ ಕಾಂಗ್ರೆಸ್ 400 ಕ್ಕೂ ಅಧಿಕ ಲೋಕಸಭೆ ಸ್ಥಾನಗಳನ್ನು ಗೆದ್ದಿತ್ತು. ಇಂದು ಕಾಂಗ್ರೆಸ್ ಗತಿ ಏನಾಗಿದೆ? ಕೇವಲ 50 ರಿಂದ 60 ಸ್ಥಾನಗಳನ್ನು ಮಾತ್ರ ಗೆದ್ದು ದಾರುಣ ಸ್ಥಿತಿಗೆ ತಲುಪಿದೆ. ಆ ಪಕ್ಷದ ಮುಖಂಡರು ಮಾಡಿದ್ದ ಭ್ರಷ್ಟಾಚಾರದಿಂದ ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ಚುನಾವಣೆ ಬಂದಾಗ ವಿಪಕ್ಷಗಳ ಟೀಕೆ ಸಾಮಾನ್ಯ. ಈ ಬಗ್ಗೆ ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಬಸವೇಶ್ವರರ ಪಂಚಲೋಹದ ಪುತ್ಥಳಿ ಅನಾವರಣ : ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಬಸವೇಶ್ವರರ ಪಂಚಲೋಹದ ಪುತ್ಥಳಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಪೂಜ್ಯ ಗುರುಪಾದ ಲಿಂಗ ಶಿವಯೋಗಿಗಳು, ಡಾ. ಚನ್ನಮಲ್ಲ ಶಿವಾಚಾರ್ಯರು, ಸಿದ್ದಮಲ್ಲ ಶಿವಾಚಾರ್ಯರು, ಶಂಕರಾನಂದ ಸ್ವಾಮೀಜಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಬಸವಕಲ್ಯಾಣ ಶಾಸಕ ಶರಣು ಸಲಗರ್ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೆ ನಿಲ್ದಾಣದಲ್ಲಿ ನಾಯಕರಿಗೆ ಸ್ವಾಗತ : ಇಂದು ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಎನ್. ರವಿಕುಮಾರ್​ ಅವರಿಗೆ ಜಿಲ್ಲಾ ಬಿಜೆಪಿ ಮುಖಂಡರು ಸ್ವಾಗತ ಕೋರಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಬೆಂಗಳೂರಿನಿಂದ ರೈಲಿನ ಮೂಲಕ ಆಗಮಿಸಿದ ನಾಯಕರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

ಪಕ್ಷ ನನಗೆ ರಾಜ್ಯ ಉಪಾಧ್ಯಕ್ಷನ ಸ್ಥಾನ ನೀಡಿದೆ: ಪಕ್ಷ ನನಗೆ ರಾಜ್ಯ ಉಪಾಧ್ಯಕ್ಷನ ಜವಾಬ್ದಾರಿಯ ಸ್ಥಾನ ಕೊಟ್ಟಿದೆ.ಯಡಿಯೂರಪ್ಪ ಅವರ ಮಗ ಅನ್ನೋ ಬಗ್ಗೆ ಹೆಮ್ಮೆಯಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಮಗ ಅನ್ನೋ ಕಾರಣಕ್ಕೆ ಕಾರ್ಯಕರ್ತರು ಪ್ರೀತಿಯಿಂದ ಕಾಣುತ್ತಾರೆ. ಇದೆಲ್ಲದರ ಒಟ್ಟಿಗೆ ನಾನೂ ಕೂಡ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ನನಗೆ ಹಿನ್ನಡೆ ಆಗಿಲ್ಲ: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ವಿಜಯೇಂದ್ರ ಅವರಿಗೆ ಹಿನ್ನಡೆ ಅಗಿದೆ ಅನ್ನೋದು ಸತ್ಯಕ್ಕೆ ದೂರದ ಮಾತು. ಅಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಅವರ ನೇತೃತ್ವದಲ್ಲಿ ಸಂಘಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ತಂದೆ ಯಡಿಯೂರಪ್ಪ ರಾಜೀನಾಮೆ ನಂತರ ನನಗೆ ಹಿನ್ನಡೆ ಆಗಿಲ್ಲ : ಬಿ ವೈ ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.