ಕಲಬುರಗಿ: ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ನಾಳೆ ಪ್ರಥಮ ಬಜೆಟ್ ಮಂಡಿಸಲಿದ್ದು, ಬಜೆಟ್ ಮಂಡಿಸಲಿರುವ ಕರ್ನಾಟಕದ ಪ್ರತಿನಿಧಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಲೋಕಸಭೆ ಚುನಾವಣೆಗೂ ಮುನ್ನ ಇದೇ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿತ್ತು. ಕಳೆದ ಬಜೆಟ್ನಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವ ಆದ್ಯತೆ ಸಿಗಲಿಲ್ಲ ಎಂಬ ಅಸಮದಾನ ಈ ಭಾಗದ ಜನರಲ್ಲಿತ್ತು. ನಾಳಿನ ಬಜೆಟ್ನಲ್ಲಾದರೂ ಹೈ-ಕಗೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನೀರಿಕ್ಷೆ ಇಲ್ಲಿನ ಜನರದಾಗಿದೆ.