ETV Bharat / state

ವಾರಾಂತ್ಯದ ಕರ್ಫ್ಯೂ : ಗುಲ್ಬರ್ಗಾ ವಿವಿ ಪರೀಕ್ಷೆ ಮುಂದೂಡಿಕೆ - ಗುಲ್ಬರ್ಗಾ ವಿವಿ ಪರೀಕ್ಷೆ ಮುಂದೂಡಿಕೆ

ವಾರಾಂತ್ಯದ ಕರ್ಫ್ಯೂ ಜಾರಿ ಕಾರಣ ಗುಲ್ಬರ್ಗಾ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.

weekend-curfew-gulbarga-university-exam-postponed
ಗುಲ್ಬರ್ಗಾ ವಿವಿ ಪರೀಕ್ಷೆ ಮುಂದೂಡಿಕೆ
author img

By

Published : Aug 6, 2021, 11:59 PM IST

ಕಲಬುರಗಿ: ಕೊರೊನಾ ನಿಯಂತ್ರಣಕ್ಕಾಗಿ ಗಡಿ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿರುವ ಕಾರಣ ಗುಲ್ಬರ್ಗಾ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗಿನ ಜಾವ ಐದು ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಈ ಕಾರಣಕ್ಕೆ ವಾರಾಂತ್ಯದಲ್ಲಿರುವ ಗುಲ್ಬರ್ಗಾ ವಿಶ್ವವಿದ್ಯಾಲಯದ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಆಗಸ್ಟ್​ 7 ಮತ್ತು 8 ಹಾಗೂ 14ರಂದು ನಡೆಯುವ ಪರೀಕ್ಷೆಗಳು ರದ್ದುಗೊಂಡಿವೆ.

ಸಸWeekend Curfew: Gulbarga university Exam Postponed
ವಿವಿ ಪ್ರಕಟಣೆ

ಪರೀಕ್ಷೆ ರದ್ದು ಮಾಡಿ ಆದೇಶ ಹೊರಡಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ ಅವರು, ವಾರಾಂತ್ಯದಲ್ಲಿರುವ ಈ ಪರೀಕ್ಷೆಗಳ ದಿನಾಂಕವನ್ನು ಆಗಸ್ಟ್ 27ರ ನಂತರ ಮರು ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರಿಗೆ ಕಳುಹಿಸಲಿದ್ದೇನೆ: ತುಮಕೂರಲ್ಲಿ CM ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.