ETV Bharat / state

ಮತ ಎಣಿಕೆ ಕೇಂದ್ರಗಳಿಗಾಗಿ ಈಗಲೇ ಸಿದ್ಧತೆ....ವ್ಯವಸ್ಥೆ ಪರಿಶೀಲಿಸಿದ ಅಧಿಕಾರಿಗಳು!

ಶುಕ್ರವಾರ ನಗರದ ವಿಶ್ವವಿದ್ಯಾಲಯಕ್ಕೆ ತೆರಳಿದ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಪಶ್ಚಿಮ ಬಂಗಾಳದ ಐಎಎಸ್​ ಅಧಿಕಾರಿ ಪರ್ವೇಜ್​ ಅಹ್ಮದ್, ಮತ ಎಣಿಕೆ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಮತ ಎಣಿಕಾ ಸಿದ್ಧತೆಗಳ ಪರಿಶೀಲನೆ ನಡೆಸಿದ ಪಶ್ಚಿಮ ಬಂಗಾಳದ ಐಎಎಸ್​ ಅಧಿಕಾರಿ ಪರ್ವೇಜ್​ ಅಹ್ಮದ್
author img

By

Published : Apr 6, 2019, 12:29 PM IST

ಕಲಬುರಗಿ: ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಪಶ್ಚಿಮ ಬಂಗಾಳದ ಐಎಎಸ್​ ಅಧಿಕಾರಿ ಪರ್ವೇಜ್​ ಅಹ್ಮದ್ ಸಿದ್ಧಿಕಿ ಅವರು ಶುಕ್ರವಾರ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಜೊತೆ ನಗರದ ವಿಶ್ವವಿದ್ಯಾಲಯಕ್ಕೆ ತೆರಳಿ ಮತ ಎಣಿಕಾ ಕೇಂದ್ರಗಳ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ವಿವಿಯ ವಿವಿಧ ವಿಭಾಗಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಈ ಕೇಂದ್ರಗಳ ಸಿದ್ಧತೆಗಳನ್ನು ವೀಕ್ಷಿಸಿದರು. ಅಲ್ಲದೆ ಈಗಾಗಲೇ ಆಯಾ ಮತ ಎಣಿಕೆ ಕೇಂದ್ರಗಳಿಗೆ ಹೊಂದಿಕೊಂಡಂತೆ ಸ್ಟ್ರಾಂಗ್​ ರೂಂಗಳ ಸಿದ್ಧಗೊಳಿಸಲಾಗುತ್ತಿದ್ದು ಈ ಕೊಠಡಿಗಳಿಗೆ ಕಿಟಕಿ ಮುಂತಾದವುಗಳನ್ನು ಇಟ್ಟಿಗೆಗಳ ಮೂಲಕ ಮುಚ್ಚಿ ಭದ್ರಪಡಿಸುವ ಕಾರ್ಯ ನಡೆಯುತ್ತಿರುವುದನ್ನು ವೀಕ್ಷಕರು ಪರಿಶೀಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಡಿ.ಎಂ. ಮದರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ್​ ಲೋಖಂಡೆ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್​ ಅಮೀನ್ ಮುಖ್ತಾರ್, ಶಿಷ್ಟಾಚಾರ ತಹಸೀಲ್ದಾರ್ ಪ್ರಕಾಶ್ ಚಿಂಚೋಳಿಕರ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.