ETV Bharat / state

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: ಹಕ್ಕು ಚಲಾಯಿಸಿದ ಶಾಸಕಿ ಖನೀಜ್ ಫಾತಿಮಾ

author img

By

Published : Sep 3, 2021, 10:05 AM IST

Updated : Sep 3, 2021, 2:26 PM IST

ಕಲಬುರಗಿ ಮಹಾನಗರ ಪಾಲಿಕೆಯ ಒಟ್ಟು 55 ವಾರ್ಡ್​ಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 533 ಮತಗಟ್ಟೆಗಳ ಪೈಕಿ 54 ಅತಿ ಸೂಕ್ಷ್ಮ, 160 ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

voting-for-kalaburagi-city-corporation
ಕಲಬುರಗಿ ಮಹಾನಗರ ಪಾಲಿಕೆಗೆ ಮತದಾನ

ಕಲಬುರಗಿ: ಮಹಾನಗರ ಪಾಲಿಕೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ನಗರದ ಪಿಡಬ್ಲೂಡಿ ಹೊಸ ಕಚೇರಿಯಲ್ಲಿ ವಾರ್ಡ್ ಸಂಖ್ಯೆ 50ರ ಮತಗಟ್ಟೆ ಸಂಖ್ಯೆ 427ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮತದಾನದ ಬಳಿಕ ಮಾತನಾಡಿದ ಶಾಸಕಿ ಖನಿಸಾ ಫಾತಿಮಾ, ಮಾಜಿ ಸಚಿವ, ತಮ್ಮ ಪತಿ ಖಮರುಲ್ ಇಸ್ಲಾಂ ಮರಣದ ನಂತರ ಇದು ಮೊದಲನೇ ಪಾಲಿಕೆ ಚುನಾವಣೆಯಾಗಿದೆ. ಅವರ ಮರಣದಿಂದ ಈ ಚುನಾವಣೆಯಲ್ಲಿ ಒಂದಿಷ್ಟು ಹಿನ್ನಡೆಯಾಗಿದೆ. ಆದರೂ ಪತಿಯ ಹಾದಿಯಲ್ಲಿಯೇ ಚುನಾವಣೆ ಗೆಲ್ಲಲು ಪ್ರಯತ್ನ ಮಾಡಲಾಗುತ್ತಿದ್ದು, ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸ ಇದೆ ಎಂದರು.

ಹಕ್ಕು ಚಲಾಯಿಸಿದ ಶಾಸಕಿ ಖನೀಜ್ ಫಾತಿಮಾ

ಬಿಜೆಪಿ ವಾಮಮಾರ್ಗ ಅನುಸರಿಸಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಏನೇ ಮಾಡಿದರೂ ನಾವು ಬಹುಮತದೊಂದಿಗೆ ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಶಾಸಕಿ ಹೇಳಿದರು.

ಕಲಬುರಗಿ ಮಹಾನಗರ ಪಾಲಿಕೆಯ ಒಟ್ಟು 55 ವಾರ್ಡ್​ಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 533 ಮತಗಟ್ಟೆಗಳ ಪೈಕಿ 54 ಅತಿ ಸೂಕ್ಷ್ಮ, 160 ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 300 ಜನ ಅಭ್ಯರ್ಥಿಗಳು ಕಣದಲ್ಲಿದ್ದು, 5,19,464 ಮತದಾರರು ಹಕ್ಕನ್ನು ಚಲಾಯಿಸಲಿದ್ದಾರೆ.

ಮತದಾನ ಹಿನ್ನೆಲೆ ಮತಗಟ್ಟೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇಬ್ಬರು ಡಿಸಿಪಿ, ಐವರು ಎಸಿಪಿ, 15 ಪಿಐ , 50 ಪಿಎಸ್​ಐ, 200 ಹೋಮ್ ಗಾರ್ಡ್ ಸೇರಿ ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: 3 ಮಹಾನಗರಗಳ ಪಾಲಿಕೆ ಮತದಾನ; ಶಾಸಕರಿಂದ ವೋಟಿಂಗ್‌.. LIVE

Last Updated : Sep 3, 2021, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.