ETV Bharat / state

ಅದಲು ಬದಲಾದ ಚಿಹ್ನೆ... ಕಿಣ್ಣಿ ಸಡಕ್​ನಲ್ಲಿ ಡಿ. 24ಕ್ಕೆ ಮರು ಮತದಾನ

ಬ್ಯಾಲೆಟ್ ಪೇಪರ್​ನಲ್ಲಿ ಬದಲಾದ ಚಿಹ್ನೆ ನಮೂದಾಗಿರುವ ಕಾರಣ ಅಭ್ಯರ್ಥಿಯೋರ್ವರು ಚುನಾವಣೆ ಚಿಹ್ನೆ ಬದಲಾಗಿದೆ ಎಂದು ತಕರಾರು ತೆಗೆದಿದ್ದಾರೆ. ಕಾರಣ ಮತದಾನ ರದ್ದುಪಡಿಸಿ ಮರು ಮತದಾನಕ್ಕೆ ಸೂಚಿಸಲಾಗಿದೆ.

kamalapur panchayth
ಚಿಹ್ನೆ
author img

By

Published : Dec 22, 2020, 5:01 PM IST

ಕಲಬುರಗಿ: ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ ಪಂಚಾಯತಿಯ ವಾರ್ಡ್ ಸಂಖ್ಯೆ 1ರಲ್ಲಿ ಮತದಾನ ರದ್ದುಪಡಿಸಲಾಗಿದ್ದು, ಮರು ಮತದಾನ ಡಿ. 24ಕ್ಕೆ ನಿಗದಿ ಮಾಡಲಾಗಿದೆ.

ಅಭ್ಯರ್ಥಿಯ ಚಿಹ್ನೆ ಅದಲು ಬದಲಾಗಿ ತಕರಾರು ತೆಗೆದ ಹಿನ್ನೆಲೆ ಮತದಾನ ರದ್ದುಪಡಿಸಿ ಮರು ಮತದಾನ ನಿಗದಿಪಡಿಸಲಾಗಿದೆ. ವಾರ್ಡ್ ನಂ. 1ರ ಅಭ್ಯರ್ಥಿ ಜೈರಾಜ್ ಹಲಗೆ ಎಂಬುವರಿಗೆ ಚುನಾವಣಾ ಆಯೋಗ ತುತ್ತೂರಿ ಚಿಹ್ನೆ ನೀಡಿತ್ತು. ಆದರೆ ಮತದಾನದ ಬ್ಯಾಲೆಟ್ ಪೇಪರ್​ನಲ್ಲಿ ತುತ್ತೂರಿ ಬದಲು ಕಹಳೆ ಊದುವ ಮನುಷ್ಯ ಚಿಹ್ನೆ ನಮೂದಾಗಿದೆ.

ತುತ್ತೂರಿ ಚಿಹ್ನೆಯಿಂದ ಪ್ರಚಾರ ಕೈಗೊಂಡಿದ್ದ ಅಭ್ಯರ್ಥಿ ಜೈರಾಜ್, ನಮಗೆ ನೀಡಿದ್ದು ಬೇರೆ ಚಿಹ್ನೆ, ಇಲ್ಲಿ ನಮೂದಾಗಿದ್ದು ಬೇರೆ ಚಿಹ್ನೆ ಎಂದು ತಕರಾರು ತೆಗೆದಿದ್ದಾರೆ. ಇದರಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪರೀಶಿಲನೆ ಮಾಡಿದಾಗ ಚಿಹ್ನೆ ತಪ್ಪಾಗಿರುವುದು ಮನವರಿಕೆಯಾಗಿದೆ. ಈ ಕಾರಣಕ್ಕಾಗಿ ಮತದಾನ ರದ್ದುಪಡಿಸಿ ಇದೇ 24ರಂದು ಮರು ಮತದಾನ ದಿನಾಂಕ ನಿಗದಿ ಮಾಡಲಾಗಿದೆ ಎಂದು ಈಟಿವಿ ಭಾರತಕ್ಕೆ ಪಿಡಿಒ ಸಿದ್ದಣ್ಣ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.