ETV Bharat / state

ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದರಿಂದ ಕಾಂಗ್ರೆಸ್​ ಪುಡಿ ಪುಡಿಯಾಗಿದೆ: ಲಕ್ಷ್ಮಣ ಸವದಿ - Village Swarajya Convention at sedam

ಸೇಡಂ ತಾಲೂಕಿನ ಕುರಕುಂಟಾ ಗ್ರಾಮದಲ್ಲಿನ ಸಿಸಿಐ (ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ) ಕಾರ್ಖಾನೆ ಖಂಡಿತವಾಗಿಯೂ ಪುನಾರಂಭಗೊಳ್ಳಲಿದೆ. ಅದರಲ್ಲಿ ಯಾವುದೇ ಸಂದೇಹ ಬೇಡ ಎಂದು ಸಂಸದ ಡಾ. ಉಮೇಶ ಜಾಧವ್​ ಭರವಸೆ ನೀಡಿದ್ದಾರೆ. ಸೇಡಂನಲ್ಲಿ ನಡೆದ ಗ್ರಾಮ ಸ್ವರಾಜ್​ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

Village Swarajya Convention
ಗ್ರಾಮ ಸ್ವರಾಜ್ಯ ಸಮಾವೇಶ ಸಮಾರಂಭ
author img

By

Published : Dec 3, 2020, 12:05 PM IST

ಸೇಡಂ: ಕಾಂಗ್ರೆಸ್ ತನ್ನ ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ಪುಡಿ ಪುಡಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್​ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಯಿಂದ ದಿಲ್ಲಿಯವರೆಗೆ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರಬೇಕಾದರೆ ಬದಲಾವಣೆಯ ಅವಶ್ಯಕತೆ ಇದೆ. ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಉದ್ದೇಶದಿಂದ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದೆ. ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಸಿಗುವುದು ಕೇವಲ ಬಿಜೆಪಿಯಲ್ಲಿ ಮಾತ್ರ. ಪಕ್ಷದ ಸಂಕಲ್ಪ ಸಿದ್ಧಿಯಾಗಬೇಕಾದರೆ ಬರುವ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಗ್ರಾಮ ಸ್ವರಾಜ್​ ಸಮಾವೇಶ

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಪಂಚಾಯತ್​ ಅಧ್ಯಕ್ಷನಿಗೆ ಇರುವ ಅಧಿಕಾರ ಪ್ರಧಾನಿಗೂ ಸಹ ಇಲ್ಲ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯ ಕ್ರಾಂತಿಯಾಗಬೇಕಿದೆ. ಅಧಿಕಾರ ವಿಕೇಂದ್ರಿಕರಣದಿಂದ ಅನೇಕ ಅವಕಾಶಗಳು ದೊರೆಯುತ್ತವೆ. ಬಡತನ ರೇಖೆಯಲ್ಲಿರುವವರ ಮತ್ತು ತಾಂಡಾಗಳ ಅಭಿವೃದ್ಧಿಯಾಗಲಿದೆ. ಸೂರಿಲ್ಲದವರಿಗೆ ಸೂರು ದೊರೆಯಲಿದೆ. ಈಗಾಗಲೇ 650 ಕೋಟಿ ರೂ. ಮಂಜೂರು ಮಾಡಿ ಸಾವಿರಾರು ಎಕರೆ ಜಮೀನು ಮತ್ತು ನೂರಾರು ಮನೆಗಳಿಗೆ ನೀರು ದೊರೆಯುವಂತೆ ಮಾಡಲಾಗಿದೆ. ಚುನಾವಣೆ ಮುಗಿದ ನಂತರ ಸೇಡಂನಲ್ಲಿ 700 ಮನೆಗಳ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಮತ್ತು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಗ್ರಾಮ ರಾಜ್ಯ ರಾಮರಾಜ್ಯವಾಗಬೇಕಾದರೆ ಭಾರತ ಮಾತೆಗೆ ಜೈಕಾರ ಹಾಕದವರಿಗೆ ತಕ್ಕ ಪಾಠ ಕಲಿಸಬೇಕು. ಬಿಜೆಪಿ ಸದಾ ಕಾರ್ಯಕರ್ತರ ಬೆನ್ನಿಗೆ ನಿಲ್ಲುತ್ತದೆ ಎಂದರು. ಇದೇ ವೇಳೆ ಬೆಳಗಾವಿ ವಿಭಾಗದ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ರವಿ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಕಲಬುರಗಿ ಸಂಸದ ಡಾ. ಉಮೇಶ ಜಾಧವ್​, ಬೀದರ್​ ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಚಿಂಚೋಳಿ ಶಾಸಕ ಅವಿನಾಶ ಜಾಧವ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಅಶ್ವಥ​ ನಾರಾಯಣ, ಅಮರನಾಥ ಪಾಟೀಲ, ಎಂ.ಬಿ. ನಂದೀಶ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸೀತಾಜಿ ಪಾಟೀಲ, ಈಶ್ವರಸಿಂಗ ಠಾಕೂರ, ಶಶಿಕಲಾ ಟೆಂಗಳಿ, ಸಂತೋಷ ಗಡಂತಿ, ಶರಣು ಮೆಡಿಕಲ್, ಚನ್ನಮ್ಮ ಪಾಟೀಲ, ಪ್ರವೀಣ ತೆಗನೂರ, ನಾಮದೇವ ರಾಠೋಡ, ಅನಂತರೆಡ್ಡಿ ಪಾಟೀಲ, ಬಸವರಾಜ ರೇವಗೊಂಡ, ಪ್ರಶಾಂತ ಕೇರಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.