ಕಲಬುರಗಿ: ಲಾಕ್ಡೌನ್ನಿಂದ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ಉತ್ತರ ಪ್ರದೇಶದ ವಲಸಿಗರನ್ನು ಕಲಬುರಗಿಯಿಂದ ಲಖನೌಗೆ ಶ್ರಮಿಕ್ ರೈಲು ಮೂಲಕ ಕಳುಹಿಸಲಾಯಿತು.
ರೈಲು ನಿಲ್ದಾಣಕ್ಕೆ ಆಗಮಿಸಿದ ವಲಸಿಗ ಕಾರ್ಮಿಕರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು. ರೈಲಿನಲ್ಲಿ ಸುಮಾರು 1,500 ಕಾರ್ಮಿಕರು ತಮ್ಮ ತವರು ಊರುಗಳಿಗೆ ತೆರಳುತ್ತಿದ್ದಾರೆ.