ETV Bharat / state

ಅಮೃತ್ ಭಾರತ್ ಸ್ಟೇಷನ್ ಯೋಜನೆ: ಕಲಬುರಗಿಯ 4 ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಅಡಿಗಲ್ಲು

Amrit Bharat stations: ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಆಯ್ಕೆಯಾಗಿರುವ ಸೊಲ್ಲಾಪುರ ರೈಲ್ವೆ ಡಿವಿಷನ್ ವ್ಯಾಪ್ತಿಯ ನಾಲ್ಕು ಸ್ಟೇಷನ್​ಗಳ ಅಭಿವೃದ್ಧಿಗಾಗಿ ಇಂದು ಸಂಸದ ಉಮೇಶ್​ ಜಾಧವ್​ ಅಡಿಗಲ್ಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಉಮೇಶ್​ ಜಾಧವ್

author img

By

Published : Aug 6, 2023, 5:26 PM IST

ಸಂಸದ ಉಮೇಶ್​ ಜಾಧವ್ ಹೇಳಿಕೆ

ಕಲಬುರಗಿ : ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅಮೃತ್ ಭಾರತ್ ಸ್ಟೇಷನ್ ಯೋಜನೆಯಲ್ಲಿ ದೇಶದ 508 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಅಡಿಗಲ್ಲು ಸಮಾರಂಭ ನೆರವೇರಿಸಿದ್ದಾರೆ. ಈ ಯೋಜನೆಯ ಪಟ್ಟಿಯಲ್ಲಿ ಸೊಲ್ಲಾಪುರ ರೈಲ್ವೆ ಡಿವಿಷನ್ ವ್ಯಾಪ್ತಿಯ ಕಲಬುರಗಿ, ಗಾಣಗಾಪುರ, ಶಾಹಬಾದ್ ಮತ್ತು ವಾಡಿ ಆಯ್ಕೆಯಾಗಿದೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲೂ ಅಡಿಗಲ್ಲು ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಲಬುರಗಿ ಸಂಸದ ಉಮೇಶ್ ಜಾಧವ್, ಶಾಸಕ ಅವಿನಾಶ್ ಜಾಧವ್, ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ ಭಾಗಿಯಾಗಿದ್ದರು.

ಮೋದಿ ಅವರ ವರ್ಚುವಲ್ ಕಾರ್ಯಕ್ರಮದ ಬಳಿಕ ಸಂಸದ ಉಮೇಶ್ ಜಾಧವ್ ಆಯ್ಕೆಯಾಗಿರುವ ನಾಲ್ಕು ರೈಲ್ವೆ ಸ್ಟೇಷನ್​ಗಳ ವಿಕಾಸಕ್ಕಾಗಿ ಅಡಿಗಲ್ಲು ಹಾಕಿದರು. ಸುಮಾರು ₹100 ಕೋಟಿ ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯ ನಾಲ್ಕು ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೇರಲಿವೆ. ನಿಲ್ದಾಣಗಳ ವಿಕಾಸ ಕಾರ್ಯಕ್ರಮದಲ್ಲಿ ಕಲಬುರಗಿಯ ನಾಗರಿಕರು ಭಾಗಿಯಾಗಿದ್ದರು.

ಉಮೇಶ ಜಾಧವ್ ಮಾತನಾಡಿ​, "ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ದೇಶಾದ್ಯಂತ 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಪ್ರಾರಂಭಿಸಲಾಗಿದೆ. ಯೋಜನೆಯ ಭಾಗವಾಗಿ 508 ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 24,470 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ನಗರದ ಎರಡೂ ಬದಿಗಳ ಸರಿಯಾದ ಏಕೀಕರಣದೊಂದಿಗೆ ನಿಲ್ದಾಣಗಳನ್ನು 'ನಗರ ಕೇಂದ್ರಗಳಾಗಿ' ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್​ಗಳನ್ನು ಸಿದ್ಧಪಡಿಸಲಾಗುತ್ತಿದೆ. ಸುಮಾರು ₹100 ಕೋಟಿ ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯ ನಾಲ್ಕು ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ ಏರಿಸಲಾಗುತ್ತಿದೆ".

"ಕಲಬುರಗಿ ಜಿಲ್ಲೆಯ ಜನರ ಬಹುದಿನಗಳ ರೈಲ್ವೆ ಡಿವಿಷನ್ ಬೇಡಿಕೆ ಕೂಡಾ ಶೀಘ್ರವೇ ಈಡೇರಲಿದೆ. ಈ ಬಗ್ಗೆ ರೈಲ್ವೆ ಸಚಿವರು ಹಾಗೂ ಪ್ರಧಾನ ಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ" ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು ಜಂಕ್ಷನ್ ಕಾಮಗಾರಿಗೆ ಚಾಲನೆ: ಮಂಗಳೂರು ನಗರದ ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 19.32 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೂ ಇಂದು ಚಾಲನೆ ನೀಡಲಾಗಿದೆ.

ಕಾರ್ಯಕ್ರಮದ ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, "ಮಂಗಳೂರು - ಬೆಂಗಳೂರು ವಂದೇ ಭಾರತ್ ರೈಲು ಸೇವೆಗೆ ಭಾರಿ ಬೇಡಿಕೆಯಿದೆ. 90 ಕಿ.ಮೀ ವಿದ್ಯುದ್ದೀಕರಣವಾದ ತಕ್ಷಣ ಮಂಗಳೂರು - ಬೆಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ. ಯುಪಿಎ ಸರ್ಕಾರ ಇದ್ದಾಗಲೂ ನಾನು ಸಂಸದನಾಗಿದ್ದೆ. ಆದರೆ ಆಗ ರೈಲಿಗೆ ಬಂದಿರುವ ಅನುದಾನಕ್ಕಿಂತ ಐದು ಪಟ್ಟು ಅಧಿಕ ಅನುದಾನವು ಮೋದಿಯವರ ಅಧಿಕಾರವಧಿಯ ಒಂಬತ್ತು ವರ್ಷಗಳಲ್ಲಿ ಬಂದಿದೆ" ಎಂದರು.

"ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದ ವಿಶ್ವದರ್ಜೆಯ ರೈಲು ಕಾಮಗಾರಿ ತಕ್ಷಣ ಕೈಗೆತ್ತಿಕೊಳ್ಳುತ್ತೇವೆ. ಈ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣ ಮಾಡುವ ಕಾರ್ಯವನ್ನು ಮಾಡುತ್ತೇವೆ. ಗೂಡ್ಸ್ ಟ್ರೈನ್​ ಅನ್ನು ಉಳ್ಳಾಲಕ್ಕೆ ಸ್ಥಳಾಂತರ ಮಾಡುವ ಕುರಿತು ಚಿಂತನೆ ನಡೆಯುತ್ತಿದೆ" ಎಂದು ತಿಳಿಸಿದರು.

"ಮನೆ ಕಟ್ಟುವವರಿಗೆ ಎನ್ಒಸಿ ಸಮಸ್ಯೆಗಳಿವೆ‌. ಮೂರು ತಿಂಗಳೊಳಗೆ ಮೀಟಿಂಗ್ ಮಾಡಿ ಪೂರ್ಣ ಪರಿಹಾರ ಮಾಡುತ್ತೇವೆ. ಕಳೆದ 9 ವರ್ಷದಲ್ಲಿ 50000 ಕೋಟಿ ರೂ. ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ. 2014 ರವರೆಗೆ ಒಂದು ರೀತಿಯ ಪರಿಸ್ಥಿತಿ ಇತ್ತು. ಆ ಬಳಿಕ ಒಂದು ಪರಿಸ್ಥಿತಿಯಿದೆ. ಮೊದಲು ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯ ನಂತರ ಎಂಬ ಉಲ್ಲೇಖವಿತ್ತು. ಮುಂದಿನ ಪೀಳಿಗೆ 2014ರ ಪೂರ್ವ 2014ರ ನಂತರ ಎಂಬ ಉಲ್ಲೇಖ ಮಾಡಲಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್​ ಹೇಳಿದರು.

ಇದನ್ನೂ ಓದಿ: ಕರ್ನಾಟಕದ 13 ಸೇರಿ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ.. I.N.D.I.A ಒಕ್ಕೂಟದ ವಿರುದ್ಧ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.