ಸೇಡಂ: ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಕಲಬುರಗಿಯ ಸೇಡಂನಲ್ಲಿ ಅಭೂತಪೂರ್ವ ಬೆಂಬಲ ದೊರೆತಿದೆ.
ಬೆಳಗ್ಗೆಯಿಂದ ಬಹುತೇಕ ಜನ ರಸ್ತೆಗಿಳಿಯದ ಪರಿಣಾಮ ಇಡೀ ತಾಲೂಕು ಸ್ತಬ್ಧವಾಗಿದೆ. ಬಹುತೇಕ ರಸ್ತೆಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು. ಮೆಡಿಕಲ್ಸ್ ಹೊರತುಪಡಿಸಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಬಸ್ ನಿಲ್ದಾಣ, ಆಟೋ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.
ಗ್ರಾಮೀಣ ಭಾಗಗಳಲ್ಲೂ ಜನತಾ ಕರ್ಫ್ಯೂಗೆ ಎಲ್ಲಿಲ್ಲದ ಬೆಂಬಲ ದೊರೆತಿದ್ದು, ಗ್ರಾಮಗಳೂ ಸ್ತಬ್ಧವಾಗಿವೆ. ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲಕುಮಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಅನ್ನು ಪಟ್ಟಣಕ್ಕೆ ಕಲ್ಪಿಸಲಾಗಿತ್ತು.