ಕಲಬುರಗಿ: ಬಂಜಾರ ಸಮುದಾಯದ ಆರಾಧ್ಯ ದೈವ ರಾಮರಾವ್ ಮಹಾರಾಜರು ಆಶೀರ್ವಾದ ಮಾಡಿ ನಿಂಬೆಹಣ್ಣು ಕೊಟ್ಟಿದ್ದಾರೆಂದು ಪತ್ರಿಕಾಗೊಷ್ಠಿಯಲ್ಲಿ ಉಮೇಶ್ ಜಾಧವ್ ನಿಂಬೆಹಣ್ಣು ಪ್ರದರ್ಶನ ಮಾಡಿರುವ ಘಟನೆ ನಡೆಯಿತು.
ತಮ್ಮ ಮಗ ಅವಿನಾಶ್ ಜಾಧವ್ ಚಿಂಚೋಳಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದು, ಮಹಾರಾಜರು ಆಶೀರ್ವಾದ ಮಾಡಿ ನಿಂಬೆಹಣ್ಣು ನೀಡಿದ್ದಾರೆ. ತಮ್ಮ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಆದ್ರೆ ಜಾಧವ್ ಅವರ ಈ ನಡೆ ಕೆಲವರಿಗೆ ವಿಚಿತ್ರವಾಗಿ ಕಂಡುಬಂದಿದೆ.
ಚಿಂಚೋಳಿ ಉಪ ಚುನಾವಣೆಗೆ ಮತದಾನ ಎರಡು ದಿನ ಬಾಕಿ ಇರುವಾಗಲೇ ಜಾಧವ್ ಮತದಾರರನ್ನು ಧಾರ್ಮಿಕವಾಗಿ ಓಲೈಸಲು ಮುಂದಾಗಿದ್ದಾರಾ? ಮಹಾರಾಜರು ತಮಗೆ ಆಶೀರ್ವಾದ ಮಾಡಿದ್ದಾರೆಂದು ನಿಂಬೆಹಣ್ಣು ತೊರಿಸಿ ಬಂಜಾರ ಮತಬೇಟೆಯಾಡುತ್ತಿದ್ದಾರಾ? ಎಂಬ ಅನುಮಾನ ಕೆಲವರಲ್ಲಿ ಕಾಡಲು ಆರಂಭಿಸಿದೆ.
ಕಾಂಗ್ರೆಸ್ ನವರು ಆಡಳಿತ ಯಂತ್ರ ದುರುಪಯೋಗ ಮಾಡ್ತಿದ್ದಾರೆ. ಸೂಕ್ಷ್ಮ ಮತಕ್ಷೇತ್ರದ ಬಗ್ಗೆ ಎಚ್ಚರಿಕೆ ಇರಬೇಕೆಂದು ಈಗಾಗಲೇ ಡಿಸಿ ಹಾಗೂ ಎಸ್ಪಿ ಅವರಿಗೆ ಮನವಿ ಮಾಡಿದ್ದೇವೆ. ಕಾಂಗ್ರೆಸ್ ನವರು ಹೈದ್ರಾಬಾದ್ನಿಂದ ಗುಂಡಾಗಳನ್ನು ಕರೆಸಿದ್ದಾರೆ ಎಂದು ಆರೋಪ ಮಾಡಿದರು.
ಪ್ರಿಯಾಂಕ ಖರ್ಗೆ ಉಪ ಚುನಾವಣೆಯನ್ನು ಸ್ವಯಂ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ದುಡ್ಡು ಹಂಚಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ ಕ್ಷೇತ್ರಕ್ಕೆ ನೀಡಿದ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.