ETV Bharat / state

ದಸ್ತಾಪುರ ಗ್ರಾಮದ ಜನರಿಗೆ ವಾಂತಿ-ಭೇದಿ: ಮಹಿಳೆಯರಿಬ್ಬರು ಸಾವು, ಹಲವರು ಅಸ್ವಸ್ಥ

ಕಳೆದ ಹದಿನೈದು ದಿನಗಳಿಂದ ಗ್ರಾಮಸ್ಥರು‌ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಬಳಲಿ ಹಾಸಿಗೆ ಹಿಡಿದಿದ್ದಾರೆ. ಕಲುಷಿತ ನೀರು ಸೇವಿಸಿ ಮಕ್ಕಳು ಸೇರಿ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಕಲಬುರಗಿಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Two women died many injured after drinking poisoning water in dasanapura
ಮಹಿಳೆಯರಿಬ್ಬರು ಸಾವು, ಹಲವರು ಅಸ್ವಸ್ಥ
author img

By

Published : Sep 30, 2021, 4:03 PM IST

Updated : Sep 30, 2021, 4:46 PM IST

ಕಲಬುರಗಿ: ತಾಲೂಕಿನ ದಸ್ತಾಪುರ ಗ್ರಾಮಸ್ಥರಿಗೆ ಜೀವಜಲವೇ ವಿಷವಾಗಿ ಪರಿಣಮಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವಿಸಿ ದಸ್ತಾಪುರ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಹಾಸಿಗೆ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಗ್ರಾಮಸ್ಥರು‌ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಬಳಲುತ್ತಿದ್ದು ಹಾಸಿಗೆ ಹಿಡಿದಿದ್ದಾರೆ. ಕಲುಷಿತ ನೀರು ಕುಡಿದು ಮಕ್ಕಳು ಸೇರಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥಗೊಂಡು ಕಲಬುರಗಿಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದ್ರೌಪತಿ ಮತ್ತು ಕಮಲಾಬಾಯಿ ಎಂಬಿಬ್ಬರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ದಸ್ತಾಪುರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಮಹಿಳೆಯರಿಬ್ಬರು ಸಾವು, ಹಲವರು ಅಸ್ವಸ್ಥ

ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ನೀರಿನ ಸ್ಯಾಂಪಲ್ ಪಡೆದು ಟೆಸ್ಟ್‌ಗೆ ಕಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶುದ್ಧನೀರಿಗೆ ಬೆರಕೆಯಾಗುತ್ತಿದೆ ಚರಂಡಿ ನೀರು:

ಗ್ರಾಮಕ್ಕೆ ನೀರು ಸರಬರಾಜಾಗುವ ಬೋರ್ ವೇಲ್ ಹಳ್ಳದ ದಡಲ್ಲಿದ್ದು, ಗ್ರಾಮದ ಚರಂಡಿ ನೀರು ಬೋರ್ ವೆಲ್ ಸೇರುತ್ತಿದೆ. ಅದೇ ಬೋರ್ ವೇಲ್ ನೀರನ್ನು ಗ್ರಾಮದಲ್ಲಿ ಅಳವಡಿಸಿರುವ ಸಣ್ಣ ಟ್ಯಾಂಕರ್ ಗಳ ಮೂಲಕ ಸಪ್ಲೈ ಮಾಡಲಾಗುತ್ತಿದೆ. ಕಲುಷಿತ ಬೋರ್ ವೇಲ್ ನೀರು ಕುಡಿದು ಗ್ರಾಮಸ್ಥರು‌ ಅಸ್ವಸ್ಥಗೊಂಡು ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೂ ಇದೇ ರೀತಿ ಸಮಸ್ಯೆ ಉಂಟಾಗಿದ್ರು, ಗ್ರಾಮ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತಿಲ್ಲವಂತೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ರು ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ ನೋವು ತೋಡಿಕೊಂಡಿದ್ದಾರೆ.

ಸದ್ಯ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡುಬಿಟ್ಟು ಅಸ್ವಸ್ಥ ಐದು ಜನರನ್ನು ಒಂದು ಕೊಠಡಿಯಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ.

Last Updated : Sep 30, 2021, 4:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.