ETV Bharat / state

ಕಲಬುರಗಿಯಲ್ಲಿ ಕೋವಿಡ್​ ಹೊಡೆತ; ಮಹಾಮಾರಿಗೆ ಇಬ್ಬರು ಬಲಿ

ಮಧುಮೇಹ ಸಮಸ್ಯೆಯಿಂದ‌ ಬಳಲುತ್ತಿದ್ದ ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ ರೆಹಮತ್ ನಗರದ (58 ವರ್ಷ) ವ್ಯಕ್ತಿ ಹಾಗೂ ಆಳಂದ ಪಟ್ಟಣದ ಬಹಾರಪೇಟ್ ಪ್ರದೇಶದ (52 ವರ್ಷ) ವ್ಯಕ್ತಿ ನಿಧನರಾಗಿರುವ ಬಗ್ಗೆ ಇಂದಿನ ಆರೋಗ್ಯ ಬುಲೆಟಿನ್ ದೃಢಪಡಿಸಿದೆ.

two-men-died-by-corona-in-kalaburagi
ಜಾಗೃತಿ ಜಾಥಾ
author img

By

Published : Mar 26, 2021, 11:17 PM IST

ಕಲಬುರಗಿ: ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಮತ್ತೆ ಅಬ್ಬರಿಸಲು ಪ್ರಾರಂಭಿಸಿದೆ. ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದ್ದು, ಮೃತರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಸೋಂಕಿನಿಂದ ಇಂದು ಮತ್ತಿಬ್ಬರು ಸಾವನ್ನಪ್ಪಿದ್ದಾರೆ.

ಮಧುಮೇಹ ಸಮಸ್ಯೆಯಿಂದ‌ ಬಳಲುತ್ತಿದ್ದ ಕಲಬುರಗಿ ಹಳೇ ಜೇವರ್ಗಿ ರಸ್ತೆಯ ರೆಹಮತ್ ನಗರದ 58 ವರ್ಷದ ವ್ಯಕ್ತಿ ಹಾಗೂ ಆಳಂದ ಪಟ್ಟಣದ ಬಹಾರಪೇಟ್ ಪ್ರದೇಶದ 52 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಇಂದಿನ ಆರೋಗ್ಯ ಬುಲೆಟಿನ್ ದೃಢಪಡಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 337ಕ್ಕೆ ಏರಿಕೆಯಾಗಿದೆ.

ಪ್ರತಿನಿತ್ಯ ನಾಲ್ಕೈದು ಜನರಲ್ಲಿ ಕಂಡು ಬರುತ್ತಿದ್ದ ಸೋಂಕು, ಇದೀಗ ಕಳೆದೊಂದು ವಾರದಿಂದ ಗಣನೀಯವಾಗಿ ಏರಿಕೆಯಾಗಿದೆ.

ಮಾರ್ಚ್ 22 ರಂದು 43 ಜನರಿಗೆ ಪಾಸಿಟಿವ್, 1 ಸಾವು.
ಮಾರ್ಚ್ 23 ರಂದು 129 ಜನರಿಗೆ ಪಾಸಿಟಿವ್,1 ಸಾವು.
ಮಾರ್ಚ್ 24 ರಂದು 118 ಜನರಿಗೆ ಪಾಸಿಟಿವ್,1 ಸಾವು.
ಮಾರ್ಚ್ 25 ರಂದು 100 ಜನರಿಗೆ ಪಾಸಿಟಿವ್,0 ಸಾವು. ಮಾರ್ಚ್ 26 ರಂದು 109 ಜನರಿಗೆ ಪಾಸಿಟಿವ್,2 ಸಾವು.
ಸದ್ಯ 742 ಆಕ್ಷಿವ್​ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿನಿಂದ ಮೃತಪಟ್ಟವರು ಬಹುತೇಕ 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹೀಗಾಗಿ, ವಯೋ ವೃದ್ಧರ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಿದೆ. ಶಹಬಾದ್​ ಪಟ್ಟಣದಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೋವಿಡ್​ ಸೋಂಕು ತಡೆಗಟ್ಟಲು ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಸುವ ಕುರಿತಂತೆ ತಹಶೀಲ್ದಾರ್​ ಸುರೇಶ್​ ವರ್ಮಾ ಅವರ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.