ETV Bharat / state

ಭೀಮಾ ನದಿಗೆ ಜಾರಿಬಿದ್ದ ಯುವಕ, ರಕ್ಷಣೆಗೆ ಮುಂದಾದ ಸ್ನೇಹಿತ ಇಬ್ಬರೂ ನೀರುಪಾಲು - ಭೀಮಾ ನದಿಯಲ್ಲಿ ಯುವಕರ ಸಾವು ಪ್ರಕರಣ

ಅಫಜಲಪುರ ಪಟ್ಟಣದ ಹೊರವಲಯದಲ್ಲಿರುವ ಭೀಮಾನದಿಯಲ್ಲಿ ನಿನ್ನೆ ಸಾಯಂಕಾಲ ಯುವಕರಿಬ್ಬರು ನೀರುಪಾಲಾದ ಘಟನೆ ನಡೆದಿದೆ.

two-drowned-in-bhima-river-near-afzalpura
ಭೀಮಾ ನದಿಗೆ ಜಾರಿಬಿದ್ದ ಯುವಕ, ರಕ್ಷಣೆಗೆ ಮುಂದಾದ ಸ್ನೇಹಿತ... ಇಬ್ಬರೂ ನೀರುಪಾಲು
author img

By

Published : Oct 24, 2021, 11:50 AM IST

ಕಲಬುರಗಿ: ಕಾಲು ಜಾರಿ ನದಿಗೆ ಬಿದ್ದ ಯುವಕನನ್ನು ಮತ್ತೋರ್ವ ರಕ್ಷಣೆ ಮಾಡಲು ಯತ್ನಿಸಿ, ಬಳಿಕ ಇಬ್ಬರೂ ನೀರುಪಾಲಾದ ಘಟನೆ ಅಫಜಲಪುರ ಪಟ್ಟಣದ ಹೊರವಲಯದಲ್ಲಿರುವ ಭೀಮಾನದಿಯಲ್ಲಿ ನಿನ್ನೆ ಸಾಯಂಕಾಲ ನಡೆದಿದೆ.

ಸಂತೋಷ್ ಬಸನಾಳ ಹಾಗೂ ರವಿ ಎಂಬುವರೆ ನೀರುಪಾಲಾದ ಯುವಕರು. ಮೊದಲು ಸಂತೋಷ್ ಬಸನಾಳ ಎಂಬಾತ ಕಾಲು ತೊಳೆಯಲು ನದಿ ದಡಕ್ಕೆ ತೆರಳಿದ್ದ. ಈ ವೇಳೆ ಆಯತಪ್ಪಿ ಬಿದ್ದು ಮುಳುಗುತ್ತಿದ್ದಾಗ ಆತನ ರಕ್ಷಣೆಗೆಂದು ರವಿ ಎಂಬಾತ ನೀರಿಗೆ ಧುಮುಕಿದ್ದಾನೆ. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಜವಳ ಕಾರ್ಯಕ್ರಮಕ್ಕೆಂದು ಅಫಜಲಪುರಕ್ಕೆ ಬಂದಿದ್ದರು. ದುರಂತದಿಂದ ಜವಳದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

two-drowned-in-bhima-river-near-afzalpura
ನೀರುಪಾಲಾದ ಯುವಕರು

ಮೃತದೇಹ ಪತ್ತೆಗೆ ನಿನ್ನೆಯಿಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆ ಯುವಕ ರವಿ ಶವ ಪತ್ತೆಯಾಗಿದೆ. ಮತ್ತೋರ್ವನ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆದಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆ ಪ್ರಕರಣದಲ್ಲಿ ಪತಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.